ಪಂಜಾಬ್ನಲ್ಲಿ ಲಡ್ಡಿಗೆ ಭಾರಿ ಬೇಡಿಕೆ

ಬುಧವಾರ, 9 ಮಾರ್ಚ್ 2022 (12:48 IST)
ಸಿಹಿತಿಂಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ಆರ್ಡರ್ಗಳು ಬರುತ್ತಿರುವುದರಿಂದ ನಗರದ ಕೆಲ ಸಿಹಿತಿಂಡಿ ಅಂಗಡಿಗಳ ಮಾಲೀಕರಿಗೆ ಲಾಟರಿ ಹೊಡೆದಂತಾಗಿದೆ.
ವಿಶೇಷವಾಗಿ ದೇಸಿ ತುಪ್ಪದಿಂದ ತಯಾರಿಸಿದ 'ಮೋತಿ ಚುರ್  ಲಡ್ಡೂ'ಗೆ ಆರ್ಡರ್ಗಳ ಮಹಾಪೂರವೇ ಹರಿದು ಬರುತ್ತಿದೆ.

ಲೂಧಿಯಾನದ  ಅನೇಕ ದೊಡ್ಡ ದೊಡ್ಡ ಸಿಹಿ ತಿನಿಸುಗಳ ಅಂಗಡಿಗಳಲ್ಲಿ ಮುಂಗಡ ಆರ್ಡರ್ಗಳು ಬರುತ್ತಿವೆ. ಹೀಗಾಗಿ ಬೇಕರಿಗಳು ಸಿಹಿ ತಿಂಡಿ ಅಂಗಡಿಗಳು ಬೇಡಿಕೆ ಈಡೇರಿಸುವ ಸಲುವಾಗಿ ಲಡ್ಡುಗಳ ತಯಾರಿಯಲ್ಲಿ ತೊಡಗಿದ್ದಾರೆ.

ಚುನಾವಣಾ ಫಲಿತಾಂಶಕ್ಕೂ ಮೊದಲು ತಮಗೆ ಈಗಾಗಲೇ ಅನೇಕ ಆರ್ಡರ್ಗಳು ಬಂದಿವೆ, ವಿಶೇಷವಾಗಿ ಶಾಸಕರಾಗಲು ಹೊರಟಿರುವವರು ಲಡ್ಡು ಆರ್ಡರ್ ಮಾಡಿದ್ದಾರೆ. ಶಾಸಕರಿಗೆ ಆಪ್ತರಾಗಿರುವವರು ಕೂಡ ಲಡ್ಡಿಗೆ ಬೇಡಿಕೆ ಇರಿಸಿದ್ದಾರೆ ದೇಸಿ ತುಪ್ಪದಿಂದ ಲಡ್ಡೂ ತಯಾರಿಸುವ ಕಾರಣದಿಂದ ಬೇಡಿಕೆ ಹೆಚ್ಚಿದೆ ಎಂದು ಲೂಧಿಯಾನದ ಸಿಹಿ ಮಾರಾಟಗಾರರು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಮೊದಲೇ ಸಿಹಿ ಮಾರಾಟಗಾರರಿಗೆ ಹೆಚ್ಚಿನ ಸಂಖ್ಯೆಯ ಆರ್ಡ್ರ್ಗಳು ಬಂದಿವೆ. ಸಿಹಿ ತಯಾರಿಗಾಗಿ ಕಚ್ಚಾವಸ್ತು ಮಾತ್ರವಲ್ಲದೇ ಸಮಯಕ್ಕೆ ಸರಿಯಾಗಿ ಆರ್ಡರ್ ಪೂರ್ಣಗೊಳಿಸುವವರ ಅಗತ್ಯವೂ ಇದೆ ಎಂದು ಸಿಹಿ ಮಾರಾಟಗಾರರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ