ನರೇಗಾ ಉದ್ಯೋಗಕ್ಕೆ ಭಾರೀ ಬೇಡಿಕೆ

ಬುಧವಾರ, 1 ಸೆಪ್ಟಂಬರ್ 2021 (08:37 IST)
ಹೊಸದಿಲ್ಲಿ: ನರೇಗಾದಡಿ ಪ್ರಸ್ತುತ ಆರ್ಥಿಕ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಉದ್ಯೋಗಕ್ಕೆ ಬೇಡಿಕೆ ಉತ್ತೇಜನಕಾರಿಯಾಗಿತ್ತು.

ಈ ಮಹತ್ವಾಕಾಂಕ್ಷಿ ಯೋಜನೆಗೆ ಬಜೆಟ್ನಲ್ಲಿ ಮೀಸಲಿರಿಸಲಾದ 73 ಸಾವಿರ ಕೋ.ರೂ.ಗಳ ಪೈಕಿ ಮೊದಲ 5 ತಿಂಗಳುಗಳಲ್ಲಿ 55,915 ಕೋ.ರೂ. ವಿನಿಯೋಗವಾಗಿದ್ದು, ಹೆಚ್ಚುವರಿ ನಿಧಿ ಒದಗಿಸಬೇಕಾಗಿ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ನರೇಗಾ ವೆಬ್ಸೈಟ್ನ ಅಂಕಿಅಂಶಗಳ ಪ್ರಕಾರ, ಈ ವರ್ಷದ ಜುಲೈಯಲ್ಲಿ 3.19 ಕೋಟಿ ಕುಟುಂಬಗಳು ನರೇಗಾದಡಿ ಉದ್ಯೋಗ ನಿರ್ವಹಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ