ನವದೆಹಲಿ, ಆ.31 : ವಿವಾಹಿತ ಮಹಿಳೆಯರ ರಕ್ಷಣಾ ಕಾಯ್ದೆ (ಎಂಡಬ್ಲ್ಯೂಪಿ)ಯನ್ನು ತಿದ್ದುಪಡಿ ಮಾಡಲಾಗಿದೆ.ಎಂಡಬ್ಲ್ಯೂಪಿ ಕಾಯ್ದೆ ಪ್ರಕಾರ, ಹೂಡಿಕೆ, ಉಳಿತಾಯ, ಸಂಬಳ ಅಥವಾ ಆಸ್ತಿಯಿಂದ ಪತ್ನಿಗೆ ಯಾವುದೇ ಬಡ್ಡಿ ಸಿಕ್ಕರೆ, ಬಡ್ಡಿಯನ್ನು ಗಳಿಸಿದರೆ ಪತಿ ಅದರಲ್ಲಿ ಪಾಲು ತೆಗೆದುಕೊಳ್ಳಲು ಅವಕಾಶ ನೀಡಲಾಗಿಲ್ಲ.
ಮದುವೆಗೆ ಮೊದಲು ಮಹಿಳೆ ತನ್ನ ಕುಟುಂಬದಿಂದ ಆಸ್ತಿ ಪಡೆದರೆ ಅವಳ ಮಾಲೀಕತ್ವದ ಹಕ್ಕುಗಳನ್ನು ಕೂಡ ಹಾಕಿ ರಕ್ಷಿಸಿಕೊಳ್ಳಬಹುದಾಗಿದೆ.
ಎಂಡಬ್ಲ್ಯೂಪಿ ಕಾಯ್ದೆಯನ್ನು ಈ ಹಿಂದೆ 1874ರಲ್ಲಿ ಮಾಡಲಾಗಿದ್ದು, ವಿವಾಹಿತ ಮಹಿಳೆಯರಿಗೆ ಸಂಬಳ ಗಳಿಕೆ, ಆಸ್ತಿ ಹೂಡಿಕೆ ಮತ್ತು ಉಳಿತಾಯದ ಮಾಲಿಕತ್ವದ ಹಕ್ಕುಗಳನ್ನು ನೀಡುವ ಅಕಾರವನ್ನು ಕಾನೂನು ಹೊಂದಿದೆ.
ಪತ್ನಿಯ ಯಾವುದೇ ಆದಾಯ ಅಥವಾ ಹೂಡಿಕೆಯ ಹಕ್ಕನ್ನು ಗಂಡನಿಗೆ ನೀಡುವ ಹಕ್ಕಿಲ್ಲ ಎಂದು ಈ ಕಾಯ್ದೆಯಲ್ಲಿ ಹೇಳಲಾಗಿದೆ.