ತಿರುಪತಿ : ವರದಕ್ಷಿಣೆ ನೀಡದಿದ್ದಕ್ಕೆ ಪತಿಯೊಬ್ಬ ಪತ್ನಿಯ ನಗ್ನ ಫೋಟೊಗಳನ್ನು ಪೋಸ್ಟ್ ಮಾಡಿ ಆಕೆ ಕಾಲ್ ಗರ್ಲ್ ಎಂದು ಪ್ರಕಟಿಸಿದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ಈ ದಂಪತಿಗಳು ಮದುವೆಯಾಗಿ ಮೂರು ವರ್ಷವಾಗಿದೆ. ಮದುವೆಯಾದ ದಿನದಿಂದ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಬಳಿಕ ಆಕೆ ಗರ್ಭಿಣಿಯಾದ ಮೇಲೂ ಆಕೆಯ ಮೇಲೆ ಹಲ್ಲೆ ಮಾಡಿ ಗರ್ಭಪಾತಕ್ಕೆ ಕಾರಣನಾದ. ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ತವರು ಮನೆಗೆ ಹೋಗಿದ್ದಾಳೆ. ಆ ವೇಳೆ ಆತ ತಾನು ಕೆಲಸ ಮಾಡುತ್ತಿದ್ದ ಕಾಲೇಜು ವಾಟ್ಸಾಪ್ ಗ್ರೂಪ್ ನಲ್ಲಿ ಪತ್ನಿಯ ನಗ್ನ ಫೋಟೊವನ್ನು ಫೋಸ್ಟ್ ಮಾಡಿ ಕಾಲ್ ಗರ್ಲ್ ಎಂದು ಬಿಂಬಿಸಿ ಆಕೆಯ ರೇಟ್ ಗಂಟೆಗೆ 3000 ರೂ ಎಂದು ಪೋಸ್ಟ್ ಮಾಡಿದ್ದಾನೆ.
ಈ ವಿಚಾರ ತಿಳಿದ ಪತ್ನಿ ತನ್ನ ಕುಟುಂಬದವರ ಸಹಾಯದಿಂದ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.