ಮಗು ಹೆಣ್ಣು ಎಂದು ತಿಳಿದು ಇಂತಹ ನೀಚ ಕೆಲಸಕ್ಕೆ ಇಳಿದ ವೈದ್ಯ ಪತಿ
ಶುಕ್ರವಾರ, 5 ಫೆಬ್ರವರಿ 2021 (09:26 IST)
ಮೀರತ್ : ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ವೈದ್ಯ ಪತಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾಳೆ.
ಮಹಿಳೆಗೆ ಸುಳ್ಳು ಹೇಳಿ ಮದುವೆಯಾದ ವೈದ್ಯ ಬಳಿಕ ಆಕೆ ಗರ್ಭಿಣಿಯಾದಾಗ ಮಗು ಹೆಣ್ಣು ಎಂಬುದನ್ನು ತಿಳಿದು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.