ಹಲ್ಲುಜ್ಜದೇ ಮುತ್ತುಕೊಟ್ಟಿದ್ದಕ್ಕೆ ಆಕ್ಷೇಪಿಸಿದ ಹೆಂಡತಿಯ ಕೊಂದ ಗಂಡ
ಕೇರಳದ ಪಾಲಕ್ಕಾಡ್ ಮೂಲದ ದಂಪತಿ ನಡುವೆ ಹಲ್ಲುಜ್ಜದೇ ಮಗನಿಗೆ ಕಿಸ್ ಮಾಡಿದ ವಿಚಾರಕ್ಕೆ ಜಗಳವಾಗಿದೆ. ಮಗನಿಗೆ ಹಲ್ಲುಜ್ಜದೇ ಕಿಸ್ ಮಾಡಿದ್ದನ್ನು ಪತ್ನಿ ಆಕ್ಷೇಪಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪತಿ ಆಕೆಯ ಜೊತೆಗೆ ಜಗಳವಾಡಿದ್ದು, ಬಳಿಕ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಗಲಾಟೆ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.