ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯ ಕೊಂದ ಪತಿ
ಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಮಾರ್ಗಗಳು ಯಾವುದು ಇದೆ ಎಂದು ಇಂಟರ್ನೆಟ್ ನಲ್ಲಿ ತಡಕಾಡಿದ್ದ. ಇದೇ ರೀತಿ ವಿಡಿಯೋದಿಂದ ಪ್ರಭಾವಿತನಾಗಿ ಪತ್ನಿಯ ಹೆಸರಿಗೆ ಮೊದಲು ಇನ್ಶೂರೆನ್ಸ್ ಮಾಡಿಸಿದ್ದ. ಬಳಿಕ ಆಕೆಯನ್ನೇ ಕೊಲೆ ಮಾಡಿ ಇನ್ಶೂರೆನ್ಸ್ ಹಣ ಪಡೆಯಲು ಯೋಜನೆ ಹಾಕಿದ್ದ.
ಅದರಂತೆ ನಡು ರಸ್ತೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ತೆರಳಿ ನಾಲ್ವರು ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಪತಿಯ ನಾಟಕ ಬಯಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.