ವರದಕ್ಷಿಣೆ ಬೇಡಿಕೆಗಾಗಿ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಪತಿ
ಶುಕ್ರವಾರ, 29 ಡಿಸೆಂಬರ್ 2017 (12:43 IST)
ಉತ್ತರಪ್ರದೇಶ: ತ್ರಿವಳಿ ತಲಾಖ್ ನೀಡಿದರೆ ಅಪರಾಧವೆಂದು ಪರಿಗಣಿಸುವ ವಿಧೇಯಕಕ್ಕೆ ಗುರುವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತರೂ ಕೂಡ ಉತ್ತರಪ್ರದೇಶದ ಮೊರಾದಾಬಾದ್ ನ ಮಹಿಳೆಯೊಬ್ಬರಿಗೆ ವರದಕ್ಷಿಣೆ ಬೇಡಿಕೆಗಾಗಿ ಆಕೆಯ ಪತಿ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ.
ತ್ರಿವಳಿ ತಲಾಖ್ ಗೆ ಒಳಗಾಗಿರುವ ಮಹಿಳೆ ವಿರುಶಾ ಎಂದು ತಿಳಿದುಬಂದಿದ್ದು, ಈಕೆಯ ಪತಿ 10 ಲಕ್ಷ ರೂ ವರದಕ್ಷಿಣೆ ನೀಡಬೇಕೆಂದು ಆಗ್ರಹಿಸಿ ತಲಾಖ್ ನೀಡಿದ್ದಾನೆ.
ಲೋಕಸಭೆಯಲ್ಲಿ ಗುರುವಾರ ತ್ರಿವಳಿ ತಲಾಖ್ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದು , ಮುಸ್ಲಿಂ ಮಹಿಳೆಯರಿಗೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದರೆ ಅದನ್ನು ಅಪರಾಧವೆಂದು ಪರಿಗಣಿಸಿ ಆತನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುತ್ತದೆ. ಸರ್ಕಾರ ಈ ಮಸೂದೆಯನ್ನು ಐತಿಹಾಸಿಕ ಎಂದು ಪರಿಗಣಿಸಿರುವುದರ ನಡುವೆಯು ಮುಸ್ಲಿಂರಲ್ಲಿನ ಒಂದು ವರ್ಗ ಇದನ್ನು ವಿರೋಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ