ಇಂಥ ಮಹಿಳೆಯರ ಸೆಲ್ಪಿ ಮಾಡುವ ಮುನ್ನ ಹುಷಾರ್

ಸೋಮವಾರ, 5 ಅಕ್ಟೋಬರ್ 2020 (14:18 IST)
ಯುವಕನೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಮಹಿಳೆಯೊಬ್ಬಳು ಆತನೊಂದಿಗೆ ಮೋಸದಿಂದ ಮದುವೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೀಗೆ ಮೋಸ ಮಾಡಿ ಮದುವೆಯಾಗಿದ್ದ ಮಹಿಳೆಗೆ ಈಗಾಗಲೇ ಮೂರು ಮದುವೆಯಾಗಿವೆ ಎಂಬುದನ್ನು ಯುವಕ ಪತ್ತೆ ಹಚ್ಚಿದ್ದಾನೆ.

ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದಾಗ ಆ ಪ್ರದೇಶದಲ್ಲಿ ಯುವಕ ಪಡಿತರ ವಿತರಣೆ ಮಾಡಿದ್ದನು.
ನನಗೂ ಪಡಿತರ ಬೇಕು ಎಂದು ಯುವಕನಿಗೆ ಕಾಲ್ ಮಾಡಿದ್ದ ಮಹಿಳೆ ತನ್ನ ಮನೆಗೆ ಆತನನ್ನು ಕರೆಸಿಕೊಂಡಿದ್ದಳಂತೆ.

ಆಗ ಯುವಕನ ಜೊತೆಗೆ ಸಲುಗೆಯಿಂದಲೇ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾಳೆ. ಆ ಬಳಿಕ ಆ ಫೋಟೊಗಳನ್ನು ಹಿಡಿದು ಬ್ಲ್ಯಾಕ್ ಮೇಲ್ ಶುರುಮಾಡಿ ಮೋಸದಿಂದ ಮದುವೆಯಾಗಿದ್ದಾಳೆ ಎಂದು ಯುವಕ ಕೇಸ್ ದಾಖಲು ಮಾಡಿದ್ದಾನೆ.

ಒಂದಷ್ಟು ದಿನಗಳ ನಂತರ ಮಹಿಳೆ ಈಗಾಗಲೇ ಮೂರು ಮದುವೆಗಳನ್ನು ಆಗಿರುವ ವಿಷಯ ಯುವಕನಿಗೆ ಗೊತ್ತಾಗಿದೆ.

ಮಧ್ಯ ಪ್ರದೇಶದ ಭೋಪಾಲ್ ನಗರದ ಜಹಾಂಗೀರಬಾದ್ ನಲ್ಲಿ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ