ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ: ಸಚಿವೆ ಉಮಾಭಾರತಿ

ಬುಧವಾರ, 19 ಏಪ್ರಿಲ್ 2017 (14:07 IST)
ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ. ರಾಮಮಂದಿರ ನಿರ್ಮಾಣಕ್ಕಾಗಿ ಎಂತಹ ಶಿಕ್ಷೆ ಬೇಕಾದರೂ ಅನುಭವಿಸುತ್ತೇನೆ ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವ ಉಮಾಭಾರತಿ ತಿಳಿಸಿದ್ದಾರೆ.
 
ಬಾಬ್ರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಯಾವುದೇ ಸಂಚು ರೂಪಿಸಿರಲಿಲ್ಲ. ಎಲ್ಲವು ಬಹಿರಂಗವಾಗಿ ನಡೆದಿತ್ತು ಎಂದು
ತಿಳಿಸಿದ್ದಾರೆ.
 
ನಾನು ನನ್ನ ಹುದ್ದೆಗೆ ಅಂಟಿಕೊಂಡಿರುವಂತಹ ವ್ಯಕ್ತಿಯಲ್ಲ., ರಾಮಮಂದಿರ ನಿರ್ಮಾಣ ಮಾಡುವ ಸಮಯ ಬಂದಿದೆ. ಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
 
ಕಾಂಗ್ರೆಸ್‌ ಪಕ್ಷದ ಮುಖಂಡರ ಯಾವುದೇ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಕಾಂಗ್ರೆಸ್‌ಗೆ ನನ್ನ ರಾಜೀನಾಮೆ ಕೇಳುವ ನೈತಿಕತೆಯಿಲ್ಲ ಎಂದು ಗುಡುಗಿದ್ದಾರೆ. ನನ್ನ ಮನಸ್ಸು, ಮಾತು, ಕೆಲಸ ಎಲ್ಲವೂ ಒಂದೇ ಆಗಿದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ