ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಮಹಾರಾಷ್ಟ್ರದ ಶಕ್ತಿಯನ್ನು ತೋರಿಸುತ್ತೇವೆ : ರಾಜ್ ಠಾಕ್ರೆ

ಸೋಮವಾರ, 2 ಮೇ 2022 (09:45 IST)
ಮುಂಬೈ : ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಮೇ 3ರೊಳಗೆ ತೆರವುಗೊಳಿಸದೇ ಇದ್ದರೆ ಮಹಾರಾಷ್ಟ್ರದ ನಿಜವಾದ ಶಕ್ತಿಯನ್ನು ತೋರಿಸುತ್ತೇವೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಮೇ 3ರವರೆಗೂ ಮಾತ್ರ ಗಡುವು ನೀಡಿರುವ ಬಗ್ಗೆ ದೃಢವಾಗಿರುವುದಾಗಿ ರಾಜ್ ಠಾಕ್ರೆ ಅವರು ಹೇಳಿದ್ದಾರೆ.

ಭಾನುವಾರ ಸಂಜೆ ನಡೆಸಿದ ರ್ಯಾಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಮೇ 3ರವರೆಗೂ ನೀಡಿರುವ ಗಡುವಿನ ನಂತರ ಏನಾಗುತ್ತದೆ ಎಂಬುದಕ್ಕೆ ನಾನು ಜವಾಬ್ದಾರನಾಗಿರುವುದಿಲ್ಲ.

ಧ್ವನಿವರ್ಧಕ ಶಬ್ದವು ಧಾರ್ಮಿಕ ವಿಚಾರದಲ್ಲ, ಆದರೆ ಸಾಮಾಜಿಕ ವಿಚಾರವಾಗಿದೆ. ಎಲ್ಲಾ ಧ್ವನಿವರ್ಧಕಗಳು ಮಸೀದಿಗಳ ಮೇಲೆ ಬಳಸವುದು ಕಾನೂನುಬಾಹಿರ. ಅಷ್ಟೊಂದು ಧ್ವನಿವರ್ಧಕಗಳನ್ನು ಬಳಸಲು ಅದೇನೂ ಸಂಗೀತ ಕಚೇರಿಯೇ ಎಂದು ಪ್ರಶ್ನಿಸಿದರು. 

ಉತ್ತರ ಪ್ರದೇಶ ಸರ್ಕಾರವು ಧ್ವನಿವರ್ಧಕಗಳನ್ನು ತೆಗೆದುಹಾಕುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಧ್ವನಿವರ್ಧಕಗಳನ್ನು ತೆಗೆದುಹಾಕಬೇಡಿ ಎಂದು ತಡೆದಿರುವವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ