ವಿಷದ ಬದಲು ಸಿಹಿ ಹರಡಿದರೆ ಕಂಗನಾಗೆ ಈ ಸ್ಥಿತಿ ಬರ್ತಿರ್ಲಿಲ್ಲ: ಸಂಸದೆ ಹರ್ಸ್‌ಸಿಮ್ರತ್

sampriya

ಶನಿವಾರ, 8 ಜೂನ್ 2024 (08:16 IST)
Photo By X
ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಹಿಳಾ ಪೇದೆಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಐಪಿಸಿ ಸೆಕ್ಷನ್ 321 ಮತ್ತು 341 ರ ಅಡಿಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಆದರೆ ಯಾವುದೇ ಬಂಧನವಾಗಿಲ್ಲ.
"ಮೊಹಾಲಿ ವಿಮಾನ ನಿಲ್ದಾಣ ಪೊಲೀಸರು ಐಪಿಸಿ ಸೆಕ್ಷನ್ 321 ಮತ್ತು 341 ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ, ಇದುವರೆಗೂ ಬಂಧಿಸಿಲ್ಲ. ಇದು ಜಾಮೀನು ನೀಡಬಹುದಾದ ಅಪರಾಧ" ಎಂದು ಪೊಲೀಸರು ತಿಳಿಸಿದ್ದಾರೆ.


ಶುಕ್ರವಾರ ಮುಕ್ತಾಯಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಭಾಗವಹಿಸಲು ಕಂಗನಾ ದೆಹಲಿಗೆ ವಿಮಾನ ಏರಲು ಹೊರಟಿದ್ದಾಗ ಜೂನ್ 6 ರಂದು ಮಧ್ಯಾಹ್ನ 3:30 ರ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿ ಕಂಗನಾ ಅವರ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ.

ಎಸ್‌ಎಡಿ ಸಂಸದೆ ಹರ್ಸ್‌ಸಿಮ್ರತ್ ಕೌರ್ ಬಾದಲ್ ಅವರು ನಟಿ, ನೂತನ ಸಂಸದೆ ಕಂಗನಾ ರನೌತ್ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ.

ಒಬ್ಬ ವ್ಯಕ್ತಿ ಬೇಡಾದ ಮಾತುಗಳನ್ನು ಹಾಗೂ  ಅನುಪಯುಕ್ತ ಕಾಮೆಂಟ್‌ಗಳನ್ನು ಮಾಡಿದಾಗ ಪ್ರತಿಕ್ರಿಯೆ ಬಂದೇ ಬರುತ್ತದೆ.  ಕಂಗನಾ ರನೌತ್‌ ಅವರು ತನ್ನ ಹೈಕಮಾಂಡ್ ಅನ್ನು ಮೆಚ್ಚಿಸಲು ಪ್ರಯತ್ನಿಸುವ ಬದಲು ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು .  ನಟಿಯಾಗಿ ಅವರನ್ನು ತುಂಬಾ ಜನ  ಹಿಂಬಾಲಿಸುತ್ತಾರೆ, ಅವರು ನೀವು ಮೂರ್ಖ ಮಾತುಗಳನ್ನು ಹೇಳಿದಾಗ ಮತ್ತು ಅನುಪಯುಕ್ತ ಕಾಮೆಂಟ್‌ಗಳನ್ನು ಮಾಡಿದಾಗ ಪ್ರತಿಕ್ರಿಯೆ ಉಂಟಾಗುತ್ತದೆ. ನಿಮ್ಮ ತಾಯಿಗೂ ಅಂತಹ ಮಾತುಗಳನ್ನು ಹೇಳುತಿದ್ದರೆ ನೀವು ಪ್ರತಿಕ್ರಿಯಿಸುತ್ತಿದ್ರಿ ಎಂದು ಆಕ್ರೋಶ ಹೊರಹಾಕಿದರು.

ನಿಮ್ಮ ತಪ್ಪನ್ನು ನೋಡುವ ಬದಲು ನೀವು ಅವರನ್ನು ಭಯೋತ್ಪಾದಕರು ಎಂದು ಕರೆದಿದ್ದೀರಿ. ವಿಷ ಹರಡುವುದು ನಿಮ್ಮ ಪಕ್ಷದ ನೀತಿ ... ವಿಷವನ್ನು ಹರಡುವ ಬದಲು ಸಿಹಿ ಹರಡಿದರೆ ಅಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿಲ್ಲ ಎಂದು ಕಂಗನಾ ನಡೆ ಬಗ್ಗೆ ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ