ತನಿಖಾಧಿಕಾರಿಗಳ ಪ್ರಕಾರ, ಇಬ್ಬರು ಕಾಣೆಯಾಗಿದ್ದರು. ಮಹಿಳೆಯ ಪತಿ ರಾತ್ರಿಯೇ ರಾಬರ್ಟ್ಸನ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ 1.50 ಲಕ್ಷ ರೂ.ತೆಗೆದುಕೊಂಡು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಮಾರನೇ ದಿನ ಬೆಳಿಗ್ಗೆ ಬಾಲಕನ ತಂದೆ ಕೂಡಾ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ, ಗೃಹಿಣಿಯ ಮೊಬೈಲ್ ಫೋನ್ ಕರೆಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಾರಂಭಿಸಿದರು. ಇಬ್ಬರೂ ಪ್ರತಿದಿನ ಸ್ಥಳಾಂತರಗೊಳ್ಳುತ್ತಿದ್ದರು, ವಿಶಾಖಪಟ್ಟಣಂ, ವಿಜಯವಾಡಾ, ನೆಲ್ಲೂರು ಮತ್ತು ತಮಿಳುನಾಡಿನ ಮಹಾಬಲೀಪುರಂ ಸೇರಿದಂತೆ ಕೆಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ಮಾಡಿದರು, ಅಲ್ಲಿ ಅವರು ವಸತಿ ನಿಲಯಗಳಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.