ನಾಯಿಯೊಂದಿಗೆ ಅನೈಸರ್ಗಿಕ ಸೆಕ್ಸ್ ನಡೆಸಿ ನಾಯಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿದ ವಿಚಿತ್ರ ಘಟನೆ ವರದಿಯಾಗಿದೆ
ನಾಯಿಯೊಂದಿಗೆ ಸೆಕ್ಸ್ ನಡೆಸಿದ ಆರೋಪಿಯನ್ನು ಅಸ್ಲಾಂ ಖಾನ್ ಎಂದು ಗುರುತಿಸಲಾಗಿದ್ದು, ನಾಯಿ ಸೆಕ್ಸ್ ಮಾಡುವಾಗ ಸತ್ತುಹೋಗಿದೆಯೋ ಅಥವಾ ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಿಂದ ಎರಡು ದಿನಗಳ ಹಿಂದೆ ಹೈದ್ರಾಬಾದ್‌ಗೆ ಬಂದು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಅಸ್ಲಾಂ, ಪೊದೆಗಳ ಹಿಂದೆ ನಾಯಿಯೊಂದಿಗೆ ಏನೋ ಮಾಡುತ್ತಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ನಂತರ ಆತನ ಕೃತ್ಯ ಕಂಡು ಹೌಹಾರಿ ಹೋಗಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ನಾಯಿ ಬೀದಿನಾಯಿಯಾಗಿದ್ದರಿಂದ ನೆರೆಹೊರೆಯವರೇ ಅದನ್ನು ಸಲುಹುತ್ತಿದ್ದರು. ನಾಯಿಯೊಂದಿಗೆ ಸೆಕ್ಸ್ ನಡೆಸಿದ ಆರೋಪಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಘಟನೆಗಳು ಮಾನವನಲ್ಲಿ ಅಡಗಿರುವ ಕ್ರೂರತೆಯನ್ನು ಬಿಂಬಿಸುತ್ತವೆ.ಇಂತಹ ಘಟನೆಗಳನ್ನು ತಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಾಣಿ ಸಂರಕ್ಷಣಾ ಕಾರ್ಯಕರ್ತ ಎನ್.ಜಿ. ಜಯಸಿಂಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳುಗಳ ಹಿಂದೆ ಚೆನ್ನೈ ನಗರದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ನಾಯಿಯನ್ನು ಮೂರನೇ ಮಹಡಿಯಿಂದ ಕೆಳಗೆ ಬಿಸಾಕಿದ ಘಟನೆಯ ನಂತರ, ಇಂದು ಮತ್ತೆ ಇಂತಹ ಹೀನಾಯ ಘಟನೆ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ