ಪೊಲೀಸರು ದಿಢೀರ್ ದಾಳಿ ನಡೆಸಿದಾಗಲೆಲ್ಲಾ ಪೂರ್ಣ ಕಾಲ ಜೂಜಾಡುವ ಒಂದು ಜಾಲ ಹೇಗೋ ತಪ್ಪಿಸಿಕೊಳ್ಳುತ್ತಿತ್ತು. ಇದರಿಂದ ಪೊಲೀಸರು ಅಚ್ಚರಿಗೊಂಡಿದ್ದರು. ಆದರೆ ಅಪರಾಧಿಗಳ ಜಾಡನ್ನು ಪತ್ತೆಹಚ್ಚಲು ಅಳವಡಿಸಿದ್ದ ಸಿಸಿಟಿವಿ ಜಾಲದ ಪ್ರಯೋಗವನ್ನು ಕ್ರಿಮಿನಲ್ಗಳು ಕೂಡ ಅಳವಡಿಸಿ ಪೊಲೀಸರ ದಾಳಿಯನ್ನು ಪೂರ್ವಭಾವಿಯಾಗಿ ಅರಿಯುತ್ತಿದ್ದಾರೆ. ಪೊಲೀಸರಿಗೆ ವಸಂತ್ ಗಾಂವ್ ಪ್ರದೇಶದಲ್ಲಿ ಜೂಜೂಕೋರರ ಅಡಗುತಾಣಗಳ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳ ಕುರಿತು ಮಾಹಿತಿ ಸಿಕ್ಕಿ ಗೌಪ್ಯ ಕಾರ್ಯಾಚರಣೆಗೆ ಯೋಜಿಸಿದರು.
ಕ್ರಿಮಿನಲ್ಗಳು ಅಕ್ರಮ ಮದ್ಯ, ಜೂಜು ಜಾಲ ಮತ್ತು ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಮನೆಗಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಯಾವುದೇ ಪೊಲೀಸ್ ಪೇದೆ ಮನೆಯೊಳಗೆ ಪ್ರವೇಶಿಸಿದರೆ ಅವರು ಹಣ ಕೀಳಲು ಅಥವಾ ಮಹಿಳೆಯರಿಗೆ ಕಿರುಕುಳ ನೀಡಲು ಮನೆಯೊಳಗೆ ಪ್ರವೇಶಿಸುತ್ತಾರೆಂದು ದೂರು ನೀಡಲಾಗುತ್ತಿತ್ತು. ಇದಕ್ಕೆ ಮನೆಯ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳ ಸಾಕ್ಷ್ಯ ನೀಡುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.