ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ದೊಕ್ಲಾಮ್ ವಿಚಾರವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಚೀನಾಗೆ ಮತ್ತೊಂದು ಟಾಂಗ್ ನೀಡಲು ಭಾರತ ಸಿದ್ಧತೆ ನಡೆಸಿದೆ. 69ನೇ ಗಣರಾಜ್ಯೋತ್ಸವ ಆಸಿಯಾನ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲು ಭಾರತ ಮುಂದಾಗಿದೆ.
ಇಂಡೋ-ಆಸಿಯಾನ್ 9ನೇ ಆವೃತ್ತಿಯ ಮಾತುಕತೆ ವೇಳೆ ಸುಷ್ಮಾ ಸ್ವರಾಜ್ ಈ ಘೋಷಣೆ ಮಾಡಿದ್ದಾರೆಂದು ವರದಿಯಾಗಿದೆ. ಆಸಿಯಾನ್ ಸದಸ್ಯ ರಾಷ್ಟ್ರಗಳ ಜೊತೆ ಬಾಂಧವ್ಯ ವೃದ್ಧಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಸುಷ್ಮಾ ಹೇಳಿದ್ದಾರೆ.
ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ನಮ್ಮ ಬಾಂಧವ್ಯ ವೃದ್ಧಿಸಿಕೊಂಡಿದ್ದೇವೆ. 2014ರಲ್ಲಿ ಮಯನ್ಮಾರ್`ನಲ್ಲಿ ನಡೆದಿದ್ದ ಇಂಡೋ-ಆಸಿಯನ್ ಶೃಂಗಸಭೆಯಲ್ಲಿ ಇದು ಪ್ರತಿಧ್ವನಿಸಿತ್ತು. ಭಾರತದ ಪೂರ್ವ ನೀತಿ ಆಕ್ಟ್ ಈಸ್ಟ್ ಪಾಲಿಸಿ ಎಂದು ಘೋಷಿಸಿದ್ದನ್ನ ಿಲ್ಲಿ ಸ್ಮರಿಸಬಹುದು ಎಂದು ಹೇಳಿದ್ದಾರೆ.
ಬ್ರೂನಲ್, ಕಾಂಬೋಡಿಯಾ, ಇಂಡೋನೇಶಿಯಾ, ಲಾಯ್ಸ್, ಮಲೇಶಿಯಾ, ಮಯನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಡ್ ಮತ್ತು ವಿಯೆಟ್ನಾಂ ಆಸಿಯಾನ್ ಸದಸ್ಯ ರಾಷ್ಟ್ರಗಳಾಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ