ಪಾಕ್ ಆಕ್ರಮಿತ ಕಾಶ್ಮಿರ ಬಿಟ್ಟು ತೊಲಗಿ: ಪಾಕ್‌ಗೆ ಕೇಂದ್ರ ಸರಕಾರ ಎಚ್ಚರಿಕೆ

ಗುರುವಾರ, 21 ಜುಲೈ 2016 (20:30 IST)
ಜಮ್ಮು ಕಾಶ್ಮಿರದಲ್ಲಿ ನಡೆಯತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿರುವುದನ್ನು ಸಹಿಸಿದ ಕೇಂದ್ರ ಸರಕಾರ, ಕೂಡಾ ಪಾಕ್ ಆಕ್ರಮಿತ ಕಾಶ್ಮಿರವನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ.
 
ಪಾಕಿಸ್ತಾನದಲ್ಲಿ ಉಗ್ರನ ಹತ್ಯೆ ಕುರಿತಂತೆ ಕರಾಳ ದಿನ ಆಚರಿಸಿದ್ದರಿಂದ ಕೆಂಡಾಮಂಡಲವಾದ ವಿದೇಶಾಂಗ ಸಚಿವಾಲಯ, ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.  
 
ಜಮ್ಮು ಕಾಶ್ಮಿರ ಕುರಿತಂತೆ ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಭಯೋತ್ಪಾದಕರೊಂದಿಗೆ  ಪಾಕ್ ಸರಕಾರ ಶಾಮೀಲಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದೆ. 
 
ಪಾಕಿಸ್ತಾನ ಕೂಡಲೇ ಭಾರತದ ಅಂತರಿಕ ವಿಷಯಗಳಿಂದ ದೂರವಿರುವುದು ಸೂಕ್ತ. ಹಿಂಸಾಚಾರಕ್ಕೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡಿದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 
 
ಪಾಕಿಸ್ತಾನ ಕೂಡಲೇ ಪಾಕ್ ಆಕ್ರಮಿತ ಕಾಶ್ಮಿರವನ್ನು ಬಿಟ್ಟು ತೆರಳಬೇಕು ಎಂದು ಕೇಂದ್ರ ಸರಕಾರ ಎಚ್ಚರಿಕೆಯ ಸಂದೇಶ ರವಾನಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ