ಭಾರತೀಯ ಸೇನಾ ದಾಳಿ: ಪಾಕ್ ಸೇನಾ ನೆಲೆಗಳು ಧ್ವಂಸ

ಮಂಗಳವಾರ, 23 ಮೇ 2017 (15:33 IST)
ಜಮ್ಮು ಕಾಶ್ಮಿರದ ನೌಶೇರಾ ಸೆಕ್ಟರ್‌ನಲ್ಲಿ ಪಾಕ್ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ನಡೆಸಿದ್ದು ಅನೇಕ ಪಾಕ್ ನೆಲೆಗಳನ್ನು ಧ್ವಂಸಗೊಳಿಸಿದೆ.
 
ಮೇಜರ್ ಜನರಲ್ ಅಶೋಕ್ ನೂರುಲ್ಲಾ ನೇತೃತ್ವದಲ್ಲಿ ಭಾರತೀಯ ಸೇನೆ, ಇಂದು ಬೆಳಿಗ್ಗೆಯಿಂದ ಪ್ರತಿದಾಳಿ ಆರಂಭಿಸಿದೆ. ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಸೇನಾ ಯೋಧರು ಮತ್ತು ನಾಗರಿಕರ ಹತ್ಯೆಗೆ ಯತ್ನಿಸುತ್ತಿರುವ ಪಾಕ್‌ಗೆ ಭಾರತ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
 
ಕೆಲ ದಿನಗಳ  ಹಿಂದೆ ನೌಶೇರಾ ಸೆಕ್ಟರ್‌ನಲ್ಲಿ ಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕ್ ಸೇನೆ, ಇಬ್ಬರು ಯೋಧರು ಮತ್ತು ತಂದೆ, ಪುತ್ರಿಯ ಹತ್ಯೆಗೆ ಕಾರಣವಾಗಿತ್ತು. ಇದರಿಂದಾಗಿ ಪಾಕ್ ಸೇನೆಯ ವಿರುದ್ಧ ದೇಶಾದ್ಯಂತ ಆಕ್ರೋಶ ಮೂಡಿಸಿತ್ತು.
 
ಮೇಜರ್ ಜನರಲ್ ಅಶೋಕ್ ನೂರುಲ್ಲಾ ಮಾತನಾಡಿ, ಬೇಸಿಗೆಯಲ್ಲಿ ಉಗ್ರರ ನುಸುಳುವಿಕೆ ಹೆಚ್ಚಾಗಿದೆ. ಉಗ್ರರ ನುಸುಳುವಿಕೆ ತಡೆಯಲು ದಾಳಿ ನಡೆಸಿದ್ದೇವೆ. ದಾಳಿಯ ವಿಡಿಯೋ ಕೂಡಾ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

#WATCH Pakistani posts destroyed by Indian Army in Nowshera (Jammu and Kashmir) pic.twitter.com/whrWb0wMfg

— ANI (@ANI_news) May 23, 2017

ವೆಬ್ದುನಿಯಾವನ್ನು ಓದಿ