7 ತಿಂಗಳಲ್ಲಿ ಭಾರತೀಯ ಸೇನೆ ಕೊಂದ ಉಗ್ರರ ಸಂಖ್ಯೆ ಎಷ್ಟು ಗೊತ್ತಾ..?

ಮಂಗಳವಾರ, 1 ಆಗಸ್ಟ್ 2017 (20:04 IST)
ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಯಾವಾಗಲೂ ಪ್ರಕ್ಷುಬ್ದವಾಗಿಯೇ ಇರುತ್ತೆ. ಈ ವರ್ಷ ಹಿಂದೆಂದಿಗಿಂತಲೂ ಉಗ್ರ ಉಪಟಳ ಹೆಚ್ಚಿದೆ. ಕಳೆದ ಏಳೇ ತಿಂಗಳಲ್ಲಿ 110 ಉಗ್ರರನ್ನ ಸೇನೆ ಹೊಡೆದುರುಳಿಸಿದೆ. ಅದರಲ್ಲಿ ಲಷ್ಕರ್ ಕಮಾಂಡರ್ ಬಶೀರ್  ಅಹಮ್ಮದ್ ವಾನಿ, ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್, ಲಷ್ಕರ್ ಕಮಾಂಡರ್ ಅಬು ದುಜಾನಾ ಪ್ರಮುಖರು.
 

ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಮೋಸ್ಟ್ ವಾಂಟೆಡ್ 12 ಉಗ್ರರ ಪಟ್ಟಿಯನ್ನ ಮೇ ತಿಂಗಳಲ್ಲಿ ಸೇನೆ ಬಿಡುಗಡೆ ಮಾಡಿತ್ತು. ಇದರಲ್ಲಿ ಮೇಲೆ ತಿಳಿಸಿದ ಮೂವರನ್ನ ಸೇನೆ ಫಿನಿಶ್ ಮಾಡಿದೆ. ಮುಂದಿನ ದಿನಗಳಲ್ಲಿ ಉಳಿದ ಉಗ್ರರನ್ನ ಸದೆಬಡಿಯುವ ವಿಶ್ವಾಸದಲ್ಲಿದೆ.

ಜೂನ್ 16ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಲಷ್ಕರ್ ಕಮಾಂಡರ್ ಜುನೈದ್ ಮಟ್ಟುನನ್ನ ಭಾರತೀಯ ಯೋಧರು ಹೊಡೆದುರಳಿಸಿದ್ದರು. ಇದೀಗ, ಮೋಸ್ಟ್ ವಾಮಟೆಡ್ ಅಬು ದುಜಾನಾನಿಗೆ ಗುಂಡಿಕ್ಕಲಾಗಿದೆ. ಜುಲೈ 1ರಂದು ಬಶೀರ್ ಅಹಮ್ಮದ್ ವಾನಿಯನ್ನ ಕೊಲ್ಲಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ