ಕೊನೆಗೂ ನನಸಾಗುತ್ತಿದೆ ಸೇನೆಯ ದಶಕಗಳ ಕನಸು

ಗುರುವಾರ, 19 ಜನವರಿ 2017 (08:52 IST)
ಭಾರತೀಯ ಸೈನಿಕರ ದಶಕಗಳ ಕನಸು ನನಸಾಗುವ ಕಾಲ ಬಂದಿದೆ. ಸದ್ಯದಲ್ಲೇ ಸೈನಿಕರಿಗೆ ಗುಂಡು ನಿರೋಧಕ ಅತ್ಯಾಧುನಿಕ ಹೆಲ್ಮೆಟ್‌ಗಳು ಸಿಗಲಿವೆ. 

ಈ ಹಿಂದೆ ಸೈನಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರ ಕಾನ್ಪುರ ಮೂಲದ ರಕ್ಷಣಾ ಪರಿಕರ ತಯಾರಿಕಾ ಸಂಸ್ಥೆ ಎಂಕೆಯು ಇಂಡಸ್ಟ್ರೀಸ್‌ಗೆ ಗುತ್ತಿಗೆಯನ್ನು ನೀಡಿತ್ತು. ಮತ್ತೀಗ ಹೆಲ್ಮೆಟ್ ತಯಾರಿಕೆ ಆರಂಭವಾಗಿದೆ.
 
1.58 ಲಕ್ಷ ಹೆಲ್ಮೆಟ್​ಗೆ ಬೇಡಿಕೆ ಸಲ್ಲಿಸಲಾಗಿದ್ದು, ಅಂದಾಜು 180 ಕೋಟಿ ರೂ. ಯೋಜನೆ ಇದಾಗಿದೆ. ಕಂಪನಿಯು ಮೂರು ವರ್ಷದೊಳಗಾಗಿ ಹೆಲ್ಮೆಟ್ ಪೂರೈಸಲಿದೆ.
 
ಪ್ರಸ್ತುತ ಭಾರತೀಯ ಸೈನಿಕರು ಬಳಸುತ್ತಿರುವ ಹೆಲ್ಮೆಟ್‌ಗಳು ಅತಿ ಭಾರವಾಗಿದ್ದು ಗುಂಡು ನಿರೋಧಕ ವ್ಯವಸ್ಥೆಯನ್ನು ಕೂಡ ಹೊಂದಿಲ್ಲ. 
 
ಕಳೆದ ಆಗಸ್ಟ್ ತಿಂಗಳಲ್ಲಿ ನೌಹಟ್ಟಾದಲ್ಲಿ ನಡೆದ ಉಗ್ರದಾಳಿಗೆ ಪ್ರಮೋದ್ ಕುಮಾರ್ ಎಂಬ ಸೈನಿಕ ಹುತಾತ್ಮನಾದ ಬಳಿಕ ಗುಂಡು ನಿರೋಧರ ಹೆಲ್ಮೆಟ್ ಬೇಡಿಕೆ ಜೋರಾಗಿ ಕೇಳಿ ಬರುತ್ತಿದೆ. ತಲೆಗೆ ಗುಂಡು ಹೊಕ್ಕಿದ್ದರಿಂದ ಕುಮಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ