ಮಾನ್ಸೂನ್ ಮಳೆಯಲ್ಲಿ ಭೇಟಿ ನೀಡಲೇ ಬೇಕಾದ ಸುಂದರ ತಾಣಗಳು!

ಗುರುವಾರ, 23 ಜೂನ್ 2016 (11:24 IST)
ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿ ತಾಣಗಳ ಹುಡುಕಾಟದಲ್ಲಿ ತೊಡಗಿದ್ದೀರಾ? ಹಾಗದರೇ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಮಾನ್ಸೂನ್ ಮಳೆ ಸಮಯದಲ್ಲಿ ಭಾರತದಲ್ಲಿ ನೋಡಲ್ ಬೇಕಾದ ಕೆಲವು ಸ್ಥಳಗಳ ಪರಿಚಯ ನಾವು ಮಾಡಿಕೊಡುತ್ತೇವೆ.

ಮಾಂಡು, ಮಧ್ಯಪ್ರದೇಶ
 
ಸುಂದರ ಪ್ರವಾಸಿ ತಾಣವಾಗಿರುವ 'ಓರ್ಚ್ಛಾ' ಪ್ರದೇಶದಂತೆ ಮಧ್ಯಪ್ರದೇಶದಲ್ಲಿ ಮಾಂಡು ಎಂಬ ಅದ್ಭುತ ಪ್ರವಾಸಿ ತಾಣವಿದೆ. ಪ್ರವಾಸಿಗರು ಒಮ್ಮೆಯಾದರು ಈ ಪ್ರದೇಶಕ್ಕೆ ಭೇಟಿ ನೀಡಲೇ ಬೇಕಾಗಿದೆ. 
 
ಮಾಂಡು ಸುಂದರ ಪ್ರವಾಸಿ ತಾಣ ಪ್ರಮುಖವಾಗಿ ವಾಸ್ತುಶಿಲ್ಪದ ರಚನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಾನ್ಸೂನ್ ಮಳೆ ಸುರಿಯುತ್ತಿದಂತೆ ಸರೋವರಗಳ ತುಂಬಿ ಹರಿಯುವುದರ ಜೊತೆಗೆ ಪ್ರವಾಸಿಗರಿಗೆ ಉತ್ತಮ ಆನಂದವನ್ನು ನೀಡುವ ಕ್ಷೇತ್ರವಾಗಿದೆ. ಇಲ್ಲಿ ರಾಷ್ಟ್ರೀಯ ಪಕ್ಷ ನವಿಲುಗಳ ಸಂಖ್ಯೆ ಹೆಚ್ಚಿರುವುದರಿಂದ ನವಿಲುಗಳ ಇಂಪಾದ ನೃತ್ಯ ಮತ್ತು ಕೂಗಿನಿಂದ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.
 
ಜಿರೊ, ಅರುಣಾಚಲ ಪ್ರದೇಶ
 
ಅರುಣಾಚಲ ಪ್ರದೇಶದಲ್ಲಿರುವ ಜಿರೊ ಪ್ರವಾಸಿ ತಾಣ ಚಿತ್ರಸದೃಶ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶ ಕಣಿವೆಗಳಲಿದ್ದು, ಸಮುದ್ರ ಮಟ್ಟದಿಂದ 5500 ಅಡಿ ಎತ್ತರ ಪ್ರದೇಶದಲ್ಲಿ ಈ ಪ್ರವಾಸಿ ತಾಣ ಇದೆ. ಪ್ರವಾಸಿಗರನ್ನು ಬೆರಗುಗೊಳಿಸುವ ಜಿರೊ ಪ್ರದೇಶ, ತನ್ನ ಹಸಿರು ಸೌಂದರ್ಯದಿಂದ ಎಲ್ಲರನ್ನು ರೋಮಾಂಚಕಗೊಳಿಸುವುದರಲ್ಲಿ ಸಂದೇಹವೇ ಇಲ್ಲ.
 
ಮಜುಲಿ ಅಸ್ಸಾಂ
 
ಅಸ್ಸಾಂ ರಾಜ್ಯದಲ್ಲಿರುವ ಮಜುಲಿ ಪ್ರವಾಸಿ ತಾಣ, ಒಂದು ದ್ವೀಪ ಪ್ರದೇಶವಾಗಿದೆ. ಪ್ರತಿ ವರ್ಷ ಮಾನ್ಸೂನ್ ಮಳೆ ಸುರಿದಾಗ ಈ ಪ್ರವಾಸಿ ತಾಣ ವಿಶ್ವದ ಅತೀ ದೊಡ್ಡ ನದಿಯಾಗಿ ಪರಿಣಮಿಸುತ್ತದೆ. ಈ ಸುಂದರ ಪ್ರವಾಸಿ ತಾಣ ತನ್ನ ರಮಣೀಯ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪ್ರತಿ ವರ್ಷ ಮಾನ್ಸೂನ್ ಮಳೆ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ