ಅಫ್ಘಾನಿಸ್ತಾನದಲ್ಲಿ ಅಪಹರಣಗೊಂಡಿದ್ದ ಜುಡಿತ್ ಡಿಸೋಜಾ ಬಿಡುಗಡೆ

ಶನಿವಾರ, 23 ಜುಲೈ 2016 (13:24 IST)
ಅಂತಾರಾಷ್ಟ್ರೀಯ ಎನ್‌ಜಿಓ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಜುಡಿತ್ ಡಿಸೋಜಾರನ್ನು ಶಂಕಿತ ಉಗ್ರರಿಂದ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
 
ಆಘಾ ಖಾನ್ ಫೌಂಡೇಶನ್‌ನಲ್ಲಿ ಹಿರಿಯ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ 40 ವರ್ಷ ವಯಸ್ಸಿನ ಜುಡಿತ್ ಡಿಸೋಜಾರನ್ನು ಅವರ ಕಚೇರಿಯಿಂದಲೇ ಜೂನ್ 9 ರಂದು ಅಪಹರಿಸಲಾಗಿತ್ತು. 
 
ಜುಡಿತ್ ಡಿಸೋಜಾರನ್ನು ಉಗ್ರರಿಂದ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ. ಜುಡಿತ್ ಬಿಡುಗಡೆಗಾಗಿ ಅಫ್ಘಾನಿಸ್ತಾನದ ಅಧಿಕಾರಿಗಳ ಸಹಾಯ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
 
ಕೋಲ್ಕತಾ ಮೂಲದ ನಿವಾಸಿಯಾದ ಜುಡಿತ್ ಬಿಡುಗಡೆಗಾಗಿ ವಿದೇಶಾಂಗ ಸಚಿವಾಲಯ ಅಫ್ಘಾನಿಸ್ತಾನದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಮನಪ್ರೀತ್ ವೋಹರಾ ಅವರ ಕಾರ್ಯದಕ್ಷತೆಯನ್ನು ಹೊಗಳಿದರು.
 
ಕಳೆದ ತಿಂಗಳು ಜುಡಿತ್ ಕುಟುಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಪುತ್ರಿ ವಾಪಸ್ ದೇಶಕ್ಕೆ ಮರಳಲು ಅಗತ್ಯವಾದ ನೆರವು ನೀಡುವಂತೆ ಕೋರಿದ್ದರು.  
 
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿಯವರಿಗೆ ಜುಡಿತ್ ಬಿಡುಗಡೆಗಾಗಿ ಪ್ರಯತ್ನಿಸುವಂತೆ ಕೋರಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ