ಸೋನಿಯಾ ಗಾಂಧಿಯಂತೆ ಅತ್ಯಾಚಾರಿಗಳನ್ನು ಕ್ಷಮಿಸಿ ಎಂದು ನಿರ್ಭಯಾ ತಾಯಿಗೆ ಸಲಹೆ!
ಶನಿವಾರ, 18 ಜನವರಿ 2020 (10:49 IST)
ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿದಂತೆ ನೀವೂ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಅಪರಾಧಿಗಳನ್ನು ಕ್ಷಮಿಸಿ ಮರಣದಂಡನೆ ಶಿಕ್ಷೆ ತಡೆಯಿರಿ ಎಂದು ನಿರ್ಭಯಾ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಹಿರಿಯ ವಕೀಲರೊಬ್ಬರು ಸಲಹೆ ನೀಡಿದ್ದಾರೆ!
ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಫೆಬ್ರವರಿ 1 ಕ್ಕೆ ಮುಂದೂಡಿಕೆಯಾದ ಬಳಿಕ ಮಾಧ‍್ಯಮಗಳ ಎದುರು ಕಣ್ಣೀರು ಹಾಕಿದ್ದ ನಿರ್ಭಯಾ ತಾಯಿಗೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಟ್ವೀಟ್ ಮೂಲಕ ಈ ರೀತಿ ಸಲಹೆ ನೀಡಿದ್ದಾರೆ.
ಆದರೆ ಹಿರಿಯ ವಕೀಲೆಯ ಸಲಹೆಗೆ ಟ್ವಿಟರ್ ನಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನಾಚಿಕೆಯಾಗಬೇಕು ನಿಮಗೆ ಒಂದು ಹೆಣ್ಣಾಗಿ ಈ ರೀತಿ ಮಾತನಾಡಲು ಎಂದು ಹಲವರು ಕಾಮೆಂಟ್ ಮೂಲಕ ಇಂದಿರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.