ಇಂಡೋನೇಶಿಯಾ: ಭೂಕಂಪಕ್ಕೆ 54 ಬಲಿ

ಬುಧವಾರ, 7 ಡಿಸೆಂಬರ್ 2016 (16:16 IST)
ಬುಧವಾರ ಬೆಳಗಿನ ಜಾವ ಇಂಡೋನೇಶಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಠ 54 ಜನರು ಸಾವನ್ನಪ್ಪಿದ್ದು, ಡಜನ್‌ಗಿಂತ ಹೆಚ್ಚು ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ದೇಶದ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. 

ಉತ್ತರ ಭಾಗದ ಅಕೆಹ ಪ್ರಾಂತ್ಯದಲ್ಲಿ ಈ ಪ್ರಕೃತಿ ವಿಕೋಪ ಸಂಭವಿಸಿದ್ದು, ರಿಕ್ಟರ್ ಮಾಪಕ 6.4 ಪ್ರಮಾಣ ದಾಖಲಾಗಿದೆ. 
 
ಭಾರತೀಯ ಕಾಲಮಾನ 5.03ರ ಸುಮಾರಿಗೆ ಉತ್ತರ ರಿವ್ಲೆಟ್‌ನಿಂದ 10 ಕೀಲೋಮೀಟರ್ ಆಳದಲ್ಲಿ ಕಂಪನದ ಅನುಭವವಾಗಿದೆ ಎಂದು ಜಿಯಾಲಜಿಕಲ್ ಸರ್ವೇ ತಿಳಿಸಿದೆ. 
 
ಗ್ರಾಮಸ್ಥರು, ಸೈನಿಕರು, ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು 40ಕ್ಕೂ ಹೆಚ್ಚು ಕಟ್ಟಡಗಳಡಿ ಸಿಲುಕಿರುವ ನೂರಾರು ಮಂದಿಯನ್ನು ಹೊರ ತೆಗೆಯಲಾಗುತ್ತಿದೆ. 
 
ಸುಮಾತ್ರ ದ್ವೀಪದ ಪುಟ್ಟ ಪಟ್ಟಣವಾಗಿರುವ ಮ್ಯೂರೆಡ್ಯು ಪಟ್ಟಣವೊಂದರಲ್ಲಿಯೇ 35ಕ್ಕೂ ಅಧಿಕ ಮಂದಿ ದುರ್ಮರಣವನ್ನಪ್ಪಿದ್ದಾರೆ.
 
ಭೂಕಂಪನದಿಂದಾಗಿ ಸುನಾಮಿ ಏಳುವ ಸಾಧ್ಯತೆಗಳನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ