Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

Sampriya

ಮಂಗಳವಾರ, 10 ಜೂನ್ 2025 (18:33 IST)
ಮೇಘಾಲಯ: ಇಂದೋರ್‌ನ ಉದ್ಯಮಿ ರಾಜ ರಘುವಂಶಿ ಅವರ ಭೀಕರ ಹತ್ಯೆ ಪ್ರಕರಣದಲ್ಲಿ ಪತ್ನಿ ಸೋನಮ್ ರಘುವಂಶಿ ಮುಖವಾಡದ ಬಗ್ಗೆ ಕರಾಳ ಮುಖ ಒಂದೊಂದೆ ಬಿಚ್ಚಿಡುತ್ತಿದೆ. 

ಹನಿಮೂನ್ ನೆಪದಲ್ಲಿ ಮರ್ಡರ್‌ ಪ್ಲಾನ್ ಮಾಡಿ, ಪ್ರಿಯಕರ ಸಹಾಯದಿಂದ ಪತಿ ರಾಜ ರಘುವಂಶಿಯನ್ನು ಕೊಂದಿರುವ ಪತ್ನಿ ಸೋನಮ್ ಸದ್ಯ ಪೊಲೀಸ್ ವಶದಲ್ಲಿದ್ದಾರೆ. ತನಿಖೆ ವೇಳೆ ಸೋನಮ್‌ಳ ಕರಾಳ ಮುಖಗಳು ಬಹಿರಂಗವಾಗುತ್ತಿದೆ. 

ಹನಿಮೂನ್‌ಗೆ ಹೋಗುವ ಎಂದು ಪತಿಯನ್ನು ಕರೆದುಕೊಂಡ ಹೋದ ಸೋನಂ ತನ್ನ ಪ್ರಿಯಕರನಿಗಾಗಿ ವಿಧವೆ ಆಗೋದಕ್ಕೂ ರೆಡ್ಡಿ ಇದ್ದಳೆಂಬ ವಿಚಾರ ತಿಳಿದುಬಂದಿದೆ. ಈ ಮೂಲಕ ತನ್ನ ಗಂಡನನ್ನು ಕೊಲ್ಲಲು ಸಿದ್ಧ ಎಂದು ಮದುವೆಗೂ ಮುನ್ನಾವೇ ಹೇಳಿದ್ದಳು. 


ಪತಿ ರಾಜ ರಘುವಂಶಿಯನ್ನು ಕೊಂದು ಇಡೀ ಪ್ರಕರಣವನ್ನು ದರೋಡೆ ರೀತಿ ಬಿಂಬಿಸುವುದು ಪ್ರಕರಣದ ಪ್ಲ್ಯಾನ್ ಆಗಿತ್ತು. ಈ ವಿಚಾರವನ್ನು ಪ್ರಿಯಕರ ರಾಜ್ ಕುಶ್ವಾಹಗೆ ಕೂಡಾ ತಿಳಿಸಿದ್ದಂತ್ತೆ. ರಾಜನನ್ನು ಕೊಂದು ಅದನ್ನ ದರೋಡೆಯಂತೆ ಬಿಂಬಿಸೋಣ. ನಾನು ವಿಧವೆ ಆದ್ಮೇಲೆ ನನ್ನ ತಂದೆ ನನ್ನನ್ನ ನಿನಗೆ ಕೊಟ್ಟು ಮದುವೆ ಮಾಡಿಸ್ತಾರೆ ಎಂದು ಹೇಳಿದ್ದರು. ಇದಕ್ಕೆ ರಾಜ್ ಸಹ ಒಪ್ಪಿಗೆ ಸೂಚಿಸಿದ್ದ. 

ಸೋನಂ ಮಾಸ್ಟರ್ ಪ್ಲ್ಯಾನ್ ಹೀಗಿದೆ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸೋನಂ ತಂದೆ ದೇವಿ ಸಿಂಗ್‌, ತನ್ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಾಜ್‌ಗೆ ಕೊಟ್ಟು ಮದುವೆ ಮಾಡಿಸಲು  ಒಪ್ಪಲ್ಲ ಎಂಬ ವಿಚಾರ ಆಕೆಗೆ ತಿಳಿದು, ಮೊದಲು ತಂದೆ ತೋರಿಸಿದ ಹುಡುಗನನ್ನೇ ಮದುವೆ ಆಗಿ, ಅವನನ್ನು ಕೊಂದು ವಿಧವೆ ಆದ್ಮೇಲೆ ನಮ್ಮ ತಂದೆ ನಿನಗೆ ಕೊಟ್ಟು ಮದುವೆ ಮಾಡಿಸ್ತಾರೆ ಎಂದು ಆಕೆ ನಂಬಿದ್ದಳು. ಈ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ