ಪಿ ಚಿದಂಬರಂ ಅರೆಸ್ಟ್ ಆಗಲು ಕಾರಣವಾಗಿದ್ದು ಆ ಪ್ರಭಾವಿ ಮಹಿಳೆ ನೀಡಿದ ಸ್ಟೇಟ್ ಮೆಂಟ್!

ಗುರುವಾರ, 22 ಆಗಸ್ಟ್ 2019 (10:26 IST)
ನವದೆಹಲಿ: ಮಾಜಿ ಗೃಹ ಸಚಿವ ಮತ್ತು ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಲು ಕಾರಣವಾಗಿದ್ದು ಇಂದ್ರಾಣಿ ಮುಖರ್ಜಿ ಎಂಬ ಪ್ರಭಾವಿ ಮಹಿಳೆಯ ಹೇಳಿಕೆ.


ಪುತ್ರಿಯ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ ಪತಿ ಪೀಟರ್ ಮುಖರ್ಜಿ ಒಡೆತನದ ಸಂಸ್ಥೆ ಐಎನ್ ಎಕ್ಸ್ ಮೀಡಿಯಾ. ಇದೇ ಮೀಡಿಯಾ ಸಂಸ್ಥೆಗೆ ಲಾಭ ಮಾಡಿಕೊಡಲು ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಡೀಲ್ ಮಾಡಿದ್ದರು ಇದಕ್ಕೆ ಚಿದಂಬರಂ ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದರು ಎಂಬುದು ಆರೋಪ.

ಐಎನ್ ಎಕ್ಸ್ ಹಗರಣ ಕುರಿತಂತೆ ವಿಚಾರಣೆ ವೇಳೆ ಇಂದ್ರಾಣಿ ಮತ್ತು ಪತಿ ಪೀಟರ್ ಮುಖರ್ಜಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮುಂದೆ ಚಿದಂಬರಂ ಮತ್ತು ಕಾರ್ತಿ ಚಿದಂಬರಂ ತಮ್ಮೊಂದಿಗೆ ನಡೆಸಿದ್ದ ಡೀಲ್ ವಿಚಾರವನ್ನು ಬಹಿರಂಗಪಡಿಸಿದ್ದರು. ಇದರಿಂದಾಗಿಯೇ ಈ ಹಗರಣ ಚಿದಂಬರಂ ಸಿಲುಕಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ