ಯೋಗಾ ಭಾರತಕ್ಕೆ ಸೇರಿದ್ದಲ್ಲ: ವಿಶ್ವಸಂಸ್ಥೆಯಲ್ಲಿ ಜಗ್ಗಿ ವಾಸುವೇದ್

ಮಂಗಳವಾರ, 21 ಜೂನ್ 2016 (12:50 IST)
ಯೋಗಾ ಭಾರತದ್ದಲ್ಲ ಮತ್ತು ಇದು ಭಾರತಕ್ಕೆ ಸೇರಿದ್ದಲ್ಲವಂತೆ. ಹೀಗೆಂದು ಹೇಳಿದವರು ಯಾರು ಗೊತ್ತೆ? ಅತೀಂದ್ರಿಯ ಮತ್ತು ಯೋಗ ಮಾಸ್ಟರ್ ಸದ್ಗುರು ಜಗ್ಗಿ ವಾಸುದೇವ್. ಅದು ಕೂಡ ವಿಶ್ವಸಂಸ್ಥೆಯ ಸಭೆಯಲ್ಲಿ? ಅವರು ಹಾಗೆ ಹೇಳಿದ್ದಾದರೂ ಏಕೆ ಗೊತ್ತೇ? ಮುಂದೆ ಓದಿ, ನಿಮಗೆ ತಿಳಿಯತ್ತೆ. 

 
ಸೋಮವಾರ ವಿಶ್ವಸಂಸ್ಥೆ ಸಭೆಯಲ್ಲಿ ಮಾತನ್ನಾಡುತ್ತಿದ್ದ ಜಗ್ಗಿ ವಾಸುದೇವ್, " ಹೌದು, ಇದು ಹುಟ್ಟಿದ್ದು ಭಾರತದಲ್ಲಿ. ಆದರೆ ಭಾರತಕ್ಕೆ ಸೇರಿದ್ದಲ್ಲ. ಏಕೆಂದರೆ ಯೋಗಾ ಎಂದರೆ ಸಂಪೂರ್ಣ ವಿಜ್ಞಾನ ಮತ್ತು ಯೋಗಕ್ಷೇಮದ ತಂತ್ರಜ್ಞಾನ. ವಿಜ್ಞಾನ ಕೇವಲ ಭಾರತಕ್ಕೆ ಸೇರಿದ್ದಾಗುವುದಿಲ್ಲ. ಅದು ಸಾರ್ವತ್ರಿಕ ಮತ್ತು ನಿರಂಕುಶ" , ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ದೇಶಗಳ ರಾಯಭಾರಿಗಳು ಮತ್ತು ಅಂತರಾಷ್ಟ್ರೀಯ ಅಧಿಕಾರಿಗಳು ಹಾಜರಿದ್ದರು.   
 
ಯೋಗಾ ದಿನದ, ಹಿಂದಿನ ದಿನ 'ಸಾಧಕರ ಜತೆ ಸಂವಾದ: ಯೋಗಾ ಫಾರ್ ದ ಸಸ್ಟೈನಬಲ್ ಡೆವೆಲಪ್ಮೆಂಟ್ ಗೋಲ್ಸ್ (SDGs)' ಕಾರ್ಯಕ್ರಮದಲ್ಲಿ ಮಾತನ್ನಾಡುತ್ತಿದ್ದ ವಾಸುದೇವ, "ಭಾರತೀಯರಾಗಿ ನಾವಿದರ ಬಗ್ಗೆ ಹೆಮ್ಮೆ ಪಡುತ್ತೇವೆ. ಆದರೆ ನಮ್ಮದಲ್ಲವಿದು. ವಿಶ್ವಸಂಸ್ಥೆ ಇದನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ ಎಂದರೆ ಇದನ್ನು ಭಾರತ ಜಗತ್ತಿಗೆ ಬಳುವಳಿಯಾಗಿ ನೀಡಿದೆ. ಈಗ ಇದು ನಮಗಷ್ಟೇ ಸೇರಿದ್ದಲ್ಲ", ಎನ್ನುವುದರ ಮೂಲಕ ಯೋಗ ವಿಶ್ವಕ್ಕೆ ಸೇರಿದ್ದು ಎಂದು ಜಗತ್ತಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ