ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನ ಕೇಂದ್ರ ತೆರಿಗೆ ಇಲಾಖೆ ಆಗಸ್ಟ್ 5ರವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದೇ ಕೊನೆಯ ದಿನವಾಗಿತ್ತು. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲವೆಂದು ಇಲಾಖೆಯೇ ಸ್ಪಷ್ಟಪಡಿಸಿತ್ತು. ಆದರೆ, ರಿಟರ್ನ್ಸ್ ಸಲ್ಲಿಸುವ ವೆಬ್ ಸೈಟ್`ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದೇ ಕೊನೆಯ ದಿನವಾಗಿತ್ತು. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲವೆಂದು ಇಲಾಖೆಯೇ ಸ್ಪಷ್ಟಪಡಿಸಿತ್ತು. ಆದರೆ, ರಿಟರ್ನ್ಸ್ ಸಲ್ಲಿಸುವ ವೆಬ್ ಸೈಟ್`ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.
ಐಟಿ ರಿಟರ್ನ್ಸ್ ಸಲ್ಲಿಸುವ ಭಾರತ ಸರ್ಕಾರದ incometaxindiaefiling.gov.in and cleartax.in/income-tax-efiling ವೆಬ್ ಸೈಟ್`ಗಳಲ್ಲಿ ತಾಂತ್ರಕ ದೋಷ ಕಂಡುಬಂದಿದೆ. ಕೊನೆಯ ದಿನವಾದ ಇಂದು ಐಟಿ ರಿಟರ್ನ್ಸ್ ಸಲ್ಲಿಸಲು ಉಂಟಾದ ಜನಜಂಗುಳಿಯಿಂದ ಈ ತೊಡಕು ಉಂಟಾಗಿರಬಹುದೆಂದು ಹೇಳಲಾಗಿದೆ.
ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್-16, ಬ್ಯಾಂಕ್ ಖಾತೆ ಸಂಖ್ಯೆ, ಹೂಡಿಕೆ ಮತ್ತು ಸಂಬಳದ ಮಾಹಿತಿ ಅಗತ್ಯವಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್ ಕಡ್ಡಾಯವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ