ಝುಂಝುನು ಜಿಲ್ಲೆಯ ಛಿರಾವಾ ನಗರದಲ್ಲಿ ಸೋಮವಾರ ಸಂಜೆ ಮದ್ಯದಂಗಡಿಗೆ ಬಂದ ವ್ಯಕ್ತಿಯೊಬ್ಬ 2,000ರೂಪಾಯಿ ನೋಟನ್ನು ವ್ಯಾಪಾರಿ ಕೈಗಿಟ್ಟಿದ್ದಾನೆ. ಮೊದಲು ಅದು ನಿಜವಾದ ನೋಟೆಂದು ಅಂಗಡಿಯವನು ಅದನ್ನು ಸ್ವೀಕರಿಸಿದ್ದಾನೆ. ಅಂಗಡಿಯಲ್ಲಿ ನೂಕುನುಗ್ಗಲು ಇದ್ದುದರಿಂದ ಅದನ್ನಾತ ಸರಿಯಾಗಿ ಗಮನಿಸಿರಲಿಲ್ಲ. ಆದರೆ ಆತ ಚಿಲ್ಲರೆ ಹಣವನ್ನು ಮರಳಿ ಕೊಡಲು ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದವಾಗಿದೆ.
ಆರೋಪಿಯನ್ನು ಲಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಅಂಗಡಿಯಲ್ಲಿ ಬಹಳ ಜನರಿದ್ದುದರಿಂದ ಚಿಲ್ಲರೆ ಕೊಡಲು ಅಂಗಡಿಯಾತ ವಿಳಂಬ ಮಾಡಿದ್ದಾನೆ. ಅದಕ್ಕೆ ಸಿಂಗ್ ಜಗಳಕ್ಕೆ ಇಳಿದಿದ್ದಾನೆ. ಆತನ ಆತುರತೆ ಕಂಡು ಸಂಶಯಗೊಂಡು ಅಂಗಡಿಯಾತ ದೂರು ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.