ಅಮ್ಮನನ್ನು ಮನೆಯಲ್ಲಿ ಕೂಡಿಹಾಕಿ ಕುಂಭಮೇಳಕ್ಕೆ ಹೋದ ಮಗ: ಈ ಪಾಪಕ್ಕೆ ಪರಿಹಾರವಿದೆಯೇ
ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡುವುದೇ ಪಾಪ ಕಳೆಯಲೆಂದು. ಆದರೆ ಈ ಮಗ ಹೆತ್ತ ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ಘೋರ ಪಾಪ ಮಾಡಿದ್ದಾನೆ. 65 ವರ್ಷದ ಸಂಜು ದೇವಿ ಎಂಬ ಮಹಿಳೆಯನ್ನು ಮಗ ಅಖಿಲೇಶ್ ಕುಮಾರ್ ಮನೆಯಲ್ಲಿಯೇ ಕೂಡಿ ಹಾಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕುಂಭಮೇಳಕ್ಕೆ ತೆರಳಿದ್ದಾನೆ.
ಹಸಿವಿನಿಂದಾಗಿ ವೃದ್ಧ ಮಹಿಳೆ ಮನೆಯಲ್ಲಿ ಉಳಿದಿದ್ದ ಒಣಗಿದ ಬ್ರೆಡ್ ತಿಂದು ಹೇಗೋ ಸಮಯ ಕಳೆದಿದ್ದಾಳೆ. ಆದರೆ ಅದೂ ಮುಗಿದು ಹಸಿವು ತಾಳಲಾರದೇ ಮನೆಯೊಳಗಿನಿಂದಲೇ ಕೂಗಿ ನೆರೆಹೊರೆಯವರನ್ನು ಕರೆದಿದ್ದಾಳೆ.
ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬೀಗ ತೆಗೆದು ವೃದ್ಧ ಮಹಿಳೆಯನ್ನು ರಕ್ಷಿಸಿದ್ದಾರೆ. ಇದು ಮಗ ಮತ್ತು ಸೊಸೆ ವಿರುದ್ಧ ಕೇಸ್ ದಾಖಲಾಗಿದೆ.