ಕ್ಲೀನ್‌ಚಿಟ್: ದೇಶವಿರೋಧಿ ಘೋಷಣೆ ಕೂಗಿಲ್ಲ ಕನ್ಹೈಯ್ಯ ಕುಮಾರ್

ಬುಧವಾರ, 1 ಮಾರ್ಚ್ 2017 (13:13 IST)
ಕಳೆದ ವರ್ಷ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಜೆಎನ್‌ಯುವಿನಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣದ ಮಹತ್ವದ ಬೆಳವಣಿಗೆಯಾಗಿ ಕನ್ನೈಯ್ಯ ಕುಮಾರ್‌ಗೆ ಕ್ಲೀನ್‌ಚಿಟ್ ಸಿಕ್ಕಿದೆ. 

ಕನ್ನೈಯ್ಯ ದೇಶ ವಿರೋಧಿ ಘೋಷಣೆ ಕೂಗಿಯೇ ಇಲ್ಲ ಎಂಬುದು ತನಿಖೆಯಿಂದ ಸಾಬೀತಾಗಿದೆ.
 
ಕನ್ನೈಯ್ಯ ಅವರ ಮೇಲೆ ಹೇರಿದ್ದ ಆರೋಪವನ್ನು ಸಾಬೀತು ಪಡಿಸಲು ದೆಹಲಿ ಪೊಲೀಸರು ವಿಫಲರಾಗಿದ್ದು, ತಮ್ಮ ವಿರುದ್ಧದ ದೇಶದ್ರೋಹಿ ಆರೋಪದಿಂದ ಕನ್ನೈಯ್ಯ ಮುಕ್ತರಾಗಿದ್ದಾರೆ.
 
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನವದೆಹಲಿಯ ಜವಾಹರಲಾಲ್ ವಿಶ್ವವಿದ್ಲಾಯಲಯದಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನೈಯ್ಯ, ಉಮರ್ ಖಾಲಿದ್ ಮತ್ತು ಅನಿರ್ಬನ್ 
 
ಭಟ್ಟಾಚಾರ್ಯ ಎಂಬ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಇನ್ನು ಕೆಲವು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಕನ್ನೈಯ್ಯ ವಿರುದ್ಧ ಬಲವಾದ ಸಾಕ್ಷಿ ಇದೆ ಎಂದು ದೆಹಲಿ ಪೊಲೀಸ್ ಅಧೀಕ್ಷಕ ಬಿ.ಎಸ್.ಬಸ್ಸಿ ಹೇಳಿದ್ದರು. 
 
ಧ್ವನಿ ಮಾದರಿ ಪರೀಕ್ಷೆ ಮಾಡಲಾಗಿ  ಘೋಷಣೆ ಕೂಗಿದ ಧ್ವನಿ ಕನ್ನೈಯ್ಯನವರ ಧ್ವನಿಗೆ ಹೋಲಿಕೆಯಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
 
ದೇಶವಿರೋಧಿ ಘೋಷಣೆ ಕೂಗಿದವರೆಲ್ಲರೂ ಕಾಶ್ಮೀರದವರೆಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬರು ಉಪನ್ಯಾಸಕರು ಎನ್ನಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ