ಮೂರು ಶಾಲೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬುಧವಾರ, 26 ಅಕ್ಟೋಬರ್ 2016 (08:46 IST)
ಉಗ್ರರ ಅಟ್ಟಹಾಸ, ಪ್ರತ್ಯೇಕತಾವಾದಿಗಳ ಪ್ರತಿಭಟನೆ, ಗಲಭೆ, ಹಿಂಸಾಚಾರಕ್ಕೆ ನಲುಗಿರುವ ಕಾಶ್ಮೀರದಲ್ಲಿ ದುಷ್ಕರ್ಮಿಗಳು ಮತ್ತೊಂದು ಘೋರ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕಣಿವೆ ನಾಡಿನಲ್ಲಿ ಕಳೆದ 2 ದಿನಗಳಲ್ಲಿ 3 ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ.

ನೂರ್‌ಬಾಗ್ ಪ್ರದೇಶದಲ್ಲಿರುವ  ಮತ್ತು ಅನಂತ್ ನಾಗ್, ಬಂಡಿಪೊರ್ ಜಿಲ್ಲೆಗಳಲ್ಲಿನ ಒಟ್ಟು 3 ಸರ್ಕಾರಿ ಶಾಲೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
 
ಸೋಮವಾರ ಬಂಡಿಪೊರ ಶಾಲೆಗೆ ಬೆಂಕಿ ಹಚ್ಚಲಾಗಿತ್ತು. ಶಾಲಾ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ.
 
ಮಂಗಳವಾರ ನೂರ್ಭಾಫ್ ಶಾಲೆಗೆ ಹಚ್ಚಿದ ಬೆಂಕಿಯಲ್ಲಿ ಪೀಠೋಪಕರಣಗಳೆಲ್ಲ ಸುಟ್ಟು ಕರಕಲಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ  ಬೆಂಕಿಯನ್ನು ನಂದಿಸಿದ್ದಾರೆ.
 
ಮತ್ತೀಗ ರಾಜ್ಯದ ಎಲ್ಲ ಶಾಲೆಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ