ಬಿಜೆಪಿ ನಾಯಕನ ಬರ್ಬರ ಹತ್ಯೆ; ಇಂದು ಕೇರಳ ಬಂದ್

ಗುರುವಾರ, 13 ಅಕ್ಟೋಬರ್ 2016 (08:59 IST)
ಕೇರಳದ ಪಿಣರಾಯಿಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರಮಿತ್(25) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 
 
ಈ ಹತ್ಯೆಯನ್ನು ಖಂಡಿಸಿರುವ ಬಿಜೆಪಿ ಆಡಳಿತಾಕರೂಢ ಸಿಪಿಐ(ಎಂ) ವಿರುದ್ಧ ಕಿಡಿಕಾರಿದ್ದು ಗುರುವಾರ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದೆ. 
 
2002ರಲ್ಲಿ ರಮಿತ್ ತಂದೆ ಕೂಡ ಹತ್ಯೆಯಾಗಿದ್ದರು. ಎರಡು ಹತ್ಯೆಗಳ ಹಿಂದೆ ಸಿಪಿಐಎಂ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆ. 
 
ಸಿಪಿಎಂ ಉಗ್ರರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆಯ ವಿರುದ್ಧ ನಾವು ಪ್ರಬಲವಾಗಿ ಪ್ರತಿಭಟಿಸುತ್ತೇವೆ ಎಂದು ಕೇರಳ ಬಿಜೆಪಿ ವಕ್ತಾರ ಎಮ್.ಎಸ್ ಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಕೂಡ ವಿರುದ್ಧ ಹರಿಹಾಯ್ದಿರುವ ಕುಮಾರ್, ಪಿ. ವಿಜಯನ್ ಗೂಂಡಾ ನಾಯಕನಂತೆ ವರ್ತಿಸುತ್ತಿದ್ದಾರೆ
 
ರಾಜಕೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾಗಿರುವ ಕಣ್ಣೂರಿನಲ್ಲಿ ಸಿಪಿಐಎಂ ಕಾರ್ಯಕರ್ತನ ಹತ್ಯೆ ನಡೆದ ಎರಡು ದಿನಗಳ ಬಳಿಕ ಈ ಘಟನೆ ನಡೆದಿದೆ.
 
ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ  ಒಟ್ಟು 7 ರಾಜಕೀಯ ಹತ್ಯೆಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ