ಕೇರಳದಲ್ಲಿ ಬಿಜೆಪಿ ಯಾತ್ರೆ: ಕಾಂಗ್ರೆಸ್ ಗೆ ಶುರುವಾಗಿದ್ಯಾ ನಡುಕ?

ಗುರುವಾರ, 5 ಅಕ್ಟೋಬರ್ 2017 (09:21 IST)
ಕೊಚ್ಚಿ: ಕೇರಳದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಘಟಾನುಘಟಿ ನಾಯಕರ ಮುಂದಾಳತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆಯಾ?

 
ಪರಿಸ್ಥಿತಿ ಗಮನಿಸಿದರೆ ಇದು ನಿಜವೆನಿಸುತ್ತದೆ. ಇದುವರೆಗೆ ಕೇರಳದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಎರಡೇ ಪಕ್ಷಗಳ ಪ್ರಾಬಲ್ಯವಿತ್ತು. ಒಂದಲ್ಲಾ ಒಂದು ಪಕ್ಷ ಅಧಿಕಾರ ವಹಿಸುತ್ತಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವೋಟ್ ಪ್ರಮಾಣ ಹೆಚ್ಚಿಸಿಕೊಂಡಿತ್ತು.

ಈಗ ಬಿಜೆಪಿಯ ಚಾಣಕ್ಷ್ಯ ಎಂದೇ ಹೆಸರುವಾಸಿಯಾಗಿರುವ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ ರಂಗಕ್ಕಿಳಿದಿರುವುದರಿಂದ ಎಡಪಕ್ಷಕ್ಕಿಂತ ಕಾಂಗ್ರೆಸ್ ಗೇ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ. ಹಾಗಾದಲ್ಲಿ ಕೇರಳದಲ್ಲಿ ಹೊಸ ರಾಜಕೀಯ ಸಮರ ಶುರುವಾಗುವುದು ಖಚಿತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ