ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ; ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಅರೆಸ್ಟ್
ಗುರುವಾರ, 29 ಅಕ್ಟೋಬರ್ 2020 (10:53 IST)
ಕೇರಳ : ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಜಾಮೀನು ನಿರಾಕರಿಸಿದ ಕಾರಣದಿಂದ ಕೇರಳ ಸಿಎಂ ಮಾಜಿ ಕಾರ್ಯದರ್ಶಿಯನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಕೇರಳದಲ್ಲಿ ಚಿನ್ನ ಸಾಗಾಣಿಕೆ ಪ್ರಕರಣದ ಆರೋಪಿಯ ಜೊತೆ ನಂಟು ಹೊಂದಿರುವ ಹಿನ್ನಲೆಯಲ್ಲಿ ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ರನ್ನು ಅ.16ರಂದು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆದರೆ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಜಾಮೀನು ಪಡೆದು ತಪ್ಪಿಸಿಕೊಂಡಿದ್ದರು.
ಆದರೆ ಇದೀಗ ಕೇರಳ ಹೈಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನಲೆಯಲ್ಲಿ ಶಿವಶಂಕರ್ ಅವರನ್ನು ಆಸ್ಪತ್ರೆಯಲ್ಲಿಯೇ ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆಗಾಗಿ ಎರ್ನಾಕುಲಂಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.