ಸುಪ್ರೀಂಗೆ ಕೇರಳ ಸರ್ಕಾರ ಅಫಿಡವಿಟ್?

ಸೋಮವಾರ, 17 ಅಕ್ಟೋಬರ್ 2022 (09:49 IST)
ನವದೆಹಲಿ : ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಲು ಕೋರಿರುವ ಜಾರಿ ನಿರ್ದೇಶನಾಲಯದ ಮನವಿಗೆ ನಮ್ಮ ವಿರೋಧವಿದೆ.
 
ತನಿಖಾ ಸಂಸ್ಥೆಯ ಮನವಿಯು ಆಧಾರರಹಿತ ಆರೋಪಗಳ ಮೂಲಕ ಸರ್ಕಾರಕ್ಕೆ ಕಳಂಕ ತರುವುದಾಗಿದೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ.

ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, ಪಿಎಂಎಲ್ಎ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೋರಿ ಇಡಿ ಸಲ್ಲಿಸಿರುವ ಅರ್ಜಿಯು ಆಧಾರರಹಿತ ಆರೋಪಗಳನ್ನು ಎತ್ತುವ ಮೂಲಕ ಕೇರಳ ಸರ್ಕಾರಕ್ಕೆ ಕಳಂಕ ತರುವ ದುರುದ್ದೇಶದಿಂದ ಕೂಡಿದೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ. 

ಪ್ರಕರಣ ವರ್ಗಾವಣೆಗೆ ಕೋರಿರುವ ಮನವಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಆಧಾರರಹಿತವಾದದ್ದು, ಊಹಾಪೋಹಗಳಿಂದ ಕೂಡಿದೆ. ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸಲು ವರ್ಗಾವಣೆ ಅರ್ಜಿಯಲ್ಲಿ ಯಾವುದೇ ನೈಜ ಕಾರಣಗಳನ್ನು ಹೇಳಲಾಗಿಲ್ಲ ಎಂದು ಸರ್ಕಾರ ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ