ಹೆಣ್ಣು ಮಗು ಹುಟ್ಟಿದ್ದಕ್ಕೆ ಆ್ಯಸಿಡ್ ಕುಡಿಸಿ ಹತ್ಯೆ!
ಕರೀಂಗಂಜ್ ಜಿಲ್ಲೆಯ ರತಾಬರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಭೈರಬ್ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸುಮ್ನಾ ಬೇಗಂ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧಿಸಿ ಪತಿ ಶಕೀಲ್ ಅಹ್ಮದ್ನನ್ನು ಬಂಧಿಸಲಾಗಿದೆ.
ಸುಮ್ನಾ ಬೇಗಂಗೆ ಕೆಲವು ದಿನಗಳಿಂದ ಗಂಡು ಮಗು ಜನಿಸಬೇಕು ಎಂದು ಆಕೆಯ ಅತ್ತೆ ಹಾಗೂ ಪತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದರು. ಆದರೆ ಆಕೆಗೆ ಹೆಣ್ಣು ಮಗು ಜನಿಸಿತ್ತು. ಇದರಿಂದ ಪತಿ ಹಾಗೂ ಆತನ ಕುಟುಂಬಸ್ಥರು ಅವಳಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ.