ಇತ್ತೀಚಿಗೆ ಅರವಿಂದ ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದ ಅವರು ಭಾನುವಾರ್ ಅಧಿಕೃತವಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಪೂನಮ್ ಆಜಾದ್ ಸಂಪರ್ಕದಲ್ಲಿದ್ದೇವೆ. ಹಲವು ದಿನಗಳಿಂದ ಆಪ್ ಸೇರುವ ಆತುರದಲ್ಲಿದ್ದ ಅವರು, ಇಂದು ಔಪಚಾರಿಕ ಚರ್ಚೆ ಬಳಿಕ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು. ನವೆಂಬರ್ 13 ರಂದು ಅವರು ಪಕ್ಷ ಸೇರಲು ಒಪ್ಪಿಕೊಂಡಿದ್ದರು ಎಂದು ಆಪ್ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ಪೂನಮ್ ಬಿಜೆಪಿ ದೆಹಲಿ ಯುನಿಟ್ ವಕ್ತಾರೆಯಾಗಿದ್ದರು. ಈ ಹಿಂದೆ ಅವರು ಉಪಾಧ್ಯಕ್ಷೆಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. 3 ಬಾರಿ ಬಿಜೆಪಿಯ ರಾಷ್ಟ್ರೀಯ ಕಾರ್ಯಾಕಾರಣಿ ಸದಸ್ಯೆಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. ಎರಡು ದೇಶಕಗಳ ಕಾಲ ಬಿಜೆಪಿಯಲ್ಲಿದ್ದ ಅವರು, 2003ರಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.