ಅಧಿಕೃತ ಬಂಗಲೆಗೆ ಪ್ರವೇಶ ಮಾಡಲು ಸಿಎಂ ಯೋಗಿ ತಡಮಾಡಿದ್ದೇಕೆ?!

ಮಂಗಳವಾರ, 21 ಮಾರ್ಚ್ 2017 (09:11 IST)
ಲಕ್ನೋ: ಉತ್ತರ ಪ್ರದೇಶ ಸಿಎಂ ಆದ ತಕ್ಷಣ ಯೋಗಿ ಆದಿತ್ಯನಾಥ್ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಅಧಿಕೃತ ಬಂಗಲೆಗೆ ಪ್ರವೇಶ ಮಾಡಿಲ್ಲ. ಕಾರಣ ಏನು ಗೊತ್ತಾ?!

 

ಇದುವರೆಗೆ ಅಖಿಲೇಶ್ ಯಾದವ್ ಇದ್ದ ಕಾಳಿದಾಸ್ ಮಾರ್ಗದ ಸಿಎಂ ಅಧಿಕೃತ ನಿವಾಸಕ್ಕೆ ಹಾಗೇ ಸುಮ್ಮನೆ ಹೋಗೋದಿಲ್ಲ ಎಂದಿದ್ದಾರೆ ಯೋಗಿ. ಹಳೇ ಸಿಎಂ ಇದ್ದ ಮನೆಯನ್ನು ಶುದ್ಧೀಕರಣ ಮಾಡಬೇಕಿತ್ತಂತೆ! ಅದಕ್ಕೇ ತಕ್ಷಣ ಹೋಗದೇ, ಶುದ್ಧೀಕರಣ ನಡೆಸಿದ ಬಳಿಕವಷ್ಟೇ ಬಲಗಾಲಿಟ್ಟು ಪ್ರವೇಶಿಸುವುದಾಗಿ ನಿರ್ಧರಿಸಿದ್ದಾರಂತೆ!

 
ಇದಕ್ಕಾಗಿ ಗೋರಖ್ ಪುರದ 7 ಮಂದಿ ಸನ್ಯಾಸಿಗಳು, ಪೂಜೆ, ಹವನ ನೆರವೇರಿಸಿದ್ದಾರೆ. ಸಿಎಂ ನಾಮಫಲಕದಲ್ಲಿ ಸ್ವಸ್ತಿಕ ಚಿಹ್ನೆ, ಗೇಟಿನಲ್ಲಿ ಶುಭ ಲಾಭ ಎಂದು ಬರೆಯಿಸಿಕೊಂಡಿದ್ದಾರೆ. ಇನ್ನಷ್ಟೇ ಸಿಎಂ ಯೋಗಿ ಅಧಿಕೃತ ಬಂಗಲೆಗೆ ಸ್ಥಳಾಂತರವಾಗಲಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ