ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟು ಕೊಡುವುದು ಇಲ್ಲ, ಇಳಿಯೋದು ಇಲ್ಲ. ಯುಗಾದಿ ಕಳೆದ ಮೇಲೆ ಸಿಎಂ ಬದಲಾವಣೆ ಬಗ್ಗೆ ಹೇಳ್ತೇನೆ. ಸಿಎಂ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ನಮಗೆ ಬೇಕಾದವರು. ಆದರೆ, ಸಿಎಂ ರೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್ ಸೇರಿದಂತೆ ಇನ್ನೂ ಹಲವರು ಇದ್ದಾರೆ. ದಿವ್ಯ ಯೋಗ ಯಾರಿಗೆ ಇದೆಯೋ ಅವರು ಸಿಎಂ ಆಗುತ್ತಾರೆ. ಆದರೆ, ಸಿಎಂ ಅವರನ್ನು ಸದ್ಯಕ್ಕೆ ಇಳಿಸೋದು ಕಷ್ಟ ಎಂದು ಭವಿಷ್ಯ ನುಡಿದರು.