ಅಖಿಲೇಶ್ ಘಟನೆಯಿಂದ ಲಾಲು ಪ್ರಸಾದ್ ಯಾದವ್ ಕಂಗಾಲು: ಮೋದಿ ಲೇವಡಿ

ಬುಧವಾರ, 4 ಜನವರಿ 2017 (17:15 IST)
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ತಂದೆಯನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದಂತೆ, ಪುತ್ರರು ಕೂಡಾ ತಮ್ಮನ್ನು ಆರ್‌ಜೆಡಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬಹುದು ಎನ್ನು ಆತಂಕ ಲಾಲು ಪ್ರಸಾದ್ ಯಾದವ್ ಅವರನ್ನು ಕಾಡುತ್ತಿದೆ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಲೇವಡಿ ಮಾಡಿದ್ದಾರೆ.
 
ಜನತಾ ದರ್ಬಾರ್ ಅಂಗವಾಗಿ ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಲಾಲು ಪುತ್ರ ತೇಜಸ್ವಿ ಪ್ರತಾಪ್ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದು, ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ಆರೋಗ್ಯ ಸಚಿವರಾಗಿದ್ದಾರೆ.ಪುತ್ರರು ತಮ್ಮ ವಿರುದ್ಧವಾಗಬಹುದು ಎನ್ನುವ ಆತಂಕ ಲಾಲು ಅವರನ್ನು ಕಾಡುತ್ತಿರಬಹುದು ಎನ್ನುವುದನ್ನು ನನ್ನ ಅನಿಸಿಕೆಯಾಗಿದೆ ಎಂದಿದ್ದಾರೆ. 
 
ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಮಧ್ಯದ ವೈಮನಸ್ಸು ಸರಿಪಡಿಸಲು ಯತ್ನಿಸಿ ಲಾಲು ಪ್ರಸಾದ್ ಯಾದವ್ ವಿಫಲವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
 
ಅಖಿಲೇಶ್ ತಂದೆಯ ವಿರುದ್ಧವೇ ಬಂಡೆದ್ದಂತೆ ತನ್ನ ಪುತ್ರರು ಕೂಡಾ ಬಂಡಾಯದ ಬಾವುಟ ಹಾರಿಸಬಹುದು ಎನ್ನುವ ಆತಂಕ ಲಾಲು ಯಾದವ್ ಅವರನ್ನು ಕಾಡುತ್ತಿದೆ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ