ಗಂಗ್ತೊಕ್ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದ ತೊಂದರೆಗೆ ಸಿಲುಕಿದ್ದ 300ಕ್ಕೂ ಹೆಚ್ಚು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ಚುಂಗ್ಥಾಂಗ್ನಲ್ಲಿ ಸಿಕ್ಕಿಬಿದ್ದ 300 ಪ್ರವಾಸಿಗರಿಗೆ ಸ್ಟ್ರೈಕಿಂಗ್ ಲಯನ್ ಡಿವಿಷನ್ನ ತ್ರಿಶಕ್ತಿ ಕಾರ್ಪ್ಸ್ ಪಡೆಗಳು ಗಂಗ್ತೊಕ್ಗೆ ತೆರಳಲು ತಾತ್ಕಾಲಿಕ ಸೇತುವೆ ಮೂಲಕ ದಾಟಲು ಸಹಕರಿಸಿದೆ.
ಅಲ್ಲದೇ ಪ್ರವಾಸಿಗರಿಗೆ ಸೇನೆಯಿಂದ ಆಹಾರ, ವೈದ್ಯಕೀಯ ಸೌಕರ್ಯಗಳನ್ನು ಒದಗಿಸಿ ವಿಶ್ರಾಂತಿಗೆ ಅವಕಾಶ ಮಾಡಿಕೊಡಲಾಗಿದೆ. ಸಿಲುಕಿರುವ ಪ್ರವಾಸಿಗರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.