ಹಾಡಹಗಲೇ ಲಾಯರ್ ದಂಪತಿ ಕಗ್ಗೊಲೆ

ಗುರುವಾರ, 18 ಫೆಬ್ರವರಿ 2021 (10:39 IST)
ಹೈದರಾಬಾದ್: ತೆಲಂಗಾಣದಲ್ಲಿ ಲಾಯರ್ ದಂಪತಿಯನ್ನು ಹಾಡಹಗಲೇ ರಸ್ತೆ ಮಧ್ಯದಲ್ಲಿ ಕಗ್ಗೊಲೆ ಮಾಡಲಾಗಿದೆ. ಸಾವಿಗೆ ಮುನ್ನ ದಂಪತಿ ಟಿಆರ್ ಎಸ್ ನಾಯಕರೊಬ್ಬರ ಹೆಸರು ಹೇಳಿದ್ದಾರೆ ಎನ್ನಲಾಗಿದೆ.


ಗಟ್ಟು ವಾಮನ್ ರಾವ್ ಮತ್ತು ನಾಗಮಣಿ ಎಂಬವರು ಮೃತರು. ಇವರು ತೆಲಂಗಾಣದ ಹೈ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದ್ ನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಕೆಲವು ಅಜ್ಞಾತ ವ್ಯಕ್ತಿಗಳು ಇವರ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಇಬ್ಬರೂ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದರು. ಈ ವೇಳೆ ತಮ್ಮ ಮೇಲೆ ದಾಳಿ ನಡೆಸಿದವರು ಟಿಆರ್ ಎಸ್ ನಾಯಕರು ಎಂದು ಹೇಳಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ