ಮಹಾತ್ಮಾ ಗಾಂಧಿ, ಶಾಸ್ತ್ರಿ ಜನ್ಮದಿನ: ಪ್ರಧಾನಿ ಗೌರವ ಸಮರ್ಪಣೆ

ಭಾನುವಾರ, 2 ಅಕ್ಟೋಬರ್ 2016 (13:29 IST)
ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನವಾಗಿದ್ದು ಇಬ್ಬರು ಮಹಾಪುರುಷರ ಸಮಾಧಿಗಳಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.

147ನೇ ಗಾಂಧಿ ಜಯಂತಿ ಅಂಗವಾಗಿ ನವದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಿದ ಪ್ರಧಾನಿ ತಮ್ಮ ನೆಚ್ಚಿನ ನಾಯಕ, ಅಹಿಂಸಾವಾದಿ ಗಾಂಧೀಜಿಯವರ ಸಮಾಧಿಗೆ ಪುಷ್ಪನಮನಗೈದರು.
 
ಬಳಿಕ ವಿಜಯ್ ಘಾಟ್‌ನಲ್ಲಿರುವ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು.
 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕ ಗಣ್ಯರು ಕೂಡ ಇಂದು ಮುಂಜಾನೆ ಮಹಾತ್ಮಾ ಗಾಂಧಿ ಮತ್ತು ಶಾಸ್ತ್ರಿ ಸಮಾಧಿಗೆ ತೆರಳಿ ಗೌರವ ಸಮರ್ಪಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ