ಪಾಕ್ ಆಕ್ರಮಿತ ಕಾಶ್ಮಿರ ಪಾಕ್‌ಗೆ, ಕಾಶ್ಮಿರ ಭಾರತಕ್ಕೆ: ಪಾಕ್ ಮಾಜಿ ರಾಯಭಾರಿ ಸಲಹೆ

ಶುಕ್ರವಾರ, 29 ಜುಲೈ 2016 (14:54 IST)
ಪಾಕ್ ಆಕ್ರಮಿತ ಕಾಶ್ಮಿರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು. ಜಮ್ಮು ಕಾಶ್ಮಿರವನ್ನು ಭಾರತಕ್ಕೆ ಭಿಟ್ಟುಕೊಟ್ಟಲ್ಲಿ ಉಭಯ ದೇಶಗಳ ನಡುವಿನ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಅಮೆರಿಕದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೈನ್ ಹಕ್ಕಾನಿ ಸಲಹೆ ನೀಡಿದ್ದಾರೆ.
 
ಉಭಯ ದೇಶಗಳ ಸಮಸ್ಯೆ ಪರಿಹಾರವಾದಲ್ಲಿ ಮುಂಬರುವ ದಿನಗಳಲ್ಲಿ ಕಾಶ್ಮಿರದಲ್ಲಿ ಹಿಂಸಾಚಾರ ಕೊನೆಗೊಂಡು ಶಾಂತಿಯ ತಾಣವಾಗುತ್ತದೆ ಎಂದು ಹೇಳಿದ್ದಾರೆ. 
 
ಪ್ರಧಾನ ಮಂತ್ರಿ ನವಾಜ್ ಷರೀಫ್ ನೇತೃತ್ವದ ಪಕ್ಷ ಚುನಾವಣೆಯಲ್ಲಿ ಭಾರಿ ಪ್ರಮಾಣದ ರಿಗ್ಗಿಂಗ್ ನಡೆಸಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆ ಗಿಲಿಗಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮಿರವನ್ನು ಪಾಕ್‌ಗೆ ಒಪ್ಪಿಸಿ, ಕಾಶ್ಮಿರವನ್ನು ನೀವೇ ಇಟ್ಟುಕೊಳ್ಳಿ ಎಂದು ಭಾರತವನ್ನು ಓಲೈಸುವ ಯತ್ನ ಮಾಡಿದ್ದಾರೆ. 
 
ಪಾಕಿಸ್ತಾನದ ಅಂತರಿಕ ಪರಿಸ್ಥಿತಿ ಎರಡು ದೇಶಗಳ ನಡುವಣ ಶಾಂತಿ ಮಾತುಕತೆಗೆ ಅಡ್ಡಿಯಾಗಿವೆ. ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯವಿರಬೇಕು ಎನ್ನುವ ಮನಸ್ಥಿತಿ ಪಾಕಿಸ್ತಾನದ ನಾಯಕರಿಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
 
ಭಾರತ ಮತ್ತು ಪಾಕಿಸ್ತಾನ ಮೊದಲು ಗೆಳೆಯರಾಗಲು ಪ್ರಯತ್ನಿಸಬೇಕು. ನಂತರ ಮಾತುಕತೆ ಆರಂಭಿಸಬೇಕು. ಆದರೆ, ಅದು ಸಾಧ್ಯವಿಲ್ಲ ಎನ್ನುವಂತಾಗಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಮತ್ತು ಹಪೀಝ್ ಸಯೀದ್‌ನಂತಹ ವ್ಯಕ್ತಿಗಳಿರುವದರಿಂದ ದ್ವೇಷ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೈನ್ ಹಕ್ಕಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ