ನಿಮ್ಮ ಪಕ್ಷದಿಂದ ಒಂದು ನಾಯಿಯೂ ಪ್ರಾಣ ತ್ಯಾಗ ಮಾಡಿಲ್ಲ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಸೋಮವಾರ, 6 ಫೆಬ್ರವರಿ 2017 (18:10 IST)
ಕೇರಳ ಸಂಸದ ಇ. ಅಹಮದ್ ಮರಣ ಹೊಂದಿದ ದಿನವೇ ಅದನ್ನ ಮರೆಮಾಚಿ ಬಜೆಟ್ ಮಂಡಿಸಿದ್ದೀರಾ ಎಂದು ಆರೋಪಿಸಿದ ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

`ಅಹಮದ್ ಅವರು ಮೃತಪಟ್ಟಿದ್ದರೂ ಅನಗತ್ಯವಾಗಿ ಅವರನ್ನ ವೆಂಟಿಲೇಟರಿನಲ್ಲಿ ಇಡಲಾಗಿತ್ತು. ಸಾವಿನ ಸತ್ಯವನ್ನ ಮುಚ್ಚಿಡಲು ಈ ಕೆಲಸ ಮಾಡಿದ್ದಾರೆ. "ಹೀಗಾಗಿ, ಈ ಬಗ್ಗೆ ಸಂಸದೀಯ ಸಮಿತಿ ಸಭೆ ನಡೆಯಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.

ಇದೇ ಸಂದರ್ಭ ನೋಟು ಅಮಾನ್ಯೀಕರಣ ವಿಷಯ ಪ್ರಸ್ತಾಪಿಸಿದ ಖರ್ಗೆ, ನೋಟು ಬದಸಲಾವಣೆ ಸಂದ 127 ಮಂದಿ ಮೃತಪಟ್ಟರು. ಮೋದಿ ಕೊನೆಯ ಪಕ್ಷ ಕ್ಷಮೆ ಕೇಳುವ ಗೋಜಿಗೂ ಹೋಗಲಿಲ್ಲ. ನಮ್ಮ ಪಕ್ಷದಿಂದ ಗಾಂಧೀಜಿ, ಇಂದ್ರಾಜಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ನಿಮ್ಮ ಮನೆಯಿಂದ ಒಂದು ನಾಯಿಯೂ ಪ್ರಾಣತ್ಯಾಗ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ಸಂದರ್ಭ ಸಚಿವ ಅನಂತ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿಯೂ ನಡೆಯಿತು.

ವೆಬ್ದುನಿಯಾವನ್ನು ಓದಿ