ಜಗದೀಪ್ ಧನ್ಕರ್ ಸ್ಕೂಲ್ ಟೀಚರ್ ಥರಾ ಆಡ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಆರೋಪ

Krishnaveni K

ಗುರುವಾರ, 12 ಡಿಸೆಂಬರ್ 2024 (10:21 IST)
ನವದೆಹಲಿ: ರಾಜ್ಯಸಭೆ ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ಧನ್ಕರ್ ಸ್ಕೂಲ್ ಟೀಚರ್ ಥರಾ ಆಡ್ತಿದ್ದಾರೆ ಎಂದು ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ಜಗದೀಪ್ ಧನ್ಕರ್ ಕಾರ್ಯವೈಖರಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಲ್ಮನೆಯಲ್ಲಿ ನಡೆಯುತ್ತಿರುವ ಅವಾಂತರಗಳು, ಅಡೆತಡೆಗಳಿಗೆ ಜಗದೀಪ್ ಧನ್ಕರ್ ಅವರ ಪಕ್ಷಪಾತೀ ಧೋರಣೆಯೇ ಕಾರಣ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆ ಸ್ಪೀಕರ್ ಹುದ್ದೆಗೆ ಅದರದ್ದೇ ಆದ ಘನತೆಯಿದೆ. ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಆದರೆ ಧನ್ಕರ್ ಪ್ರತಿಪಕ್ಷಗಳಿಗೆ ಕುಟುಕುತ್ತಾ ಆಗಾಗ ಸರ್ಕಾರವನ್ನುಹೊಗಳುತ್ತಾ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಹೆಡ್ ಮಾಸ್ಟರ್ ಥರಾ ಜಗದೀಪ್ ಧನ್ಕರ್ ವರ್ತಿಸುತ್ತಿದ್ದಾರೆ. ವಿಪಕ್ಷಗಳ ಹಿರಿಯ ನಾಯಕರು ಮಾತನಾಡಲು ಹೊರಟಡೆ ತಡೆಯುತ್ತಾರೆ. ಅವರ ವಿರುದ್ಧ ನಾವು ಅವಿಶ್ವಾಸ ನಿರ್ಣಯ ಮಂಡಿಸಲಿದ್ದೇವೆ. ನಮಗೆ ಸ್ಪೀಕರ್ ಮೇಲೆ ಯಾವುದೇ ಭರವಸೆ ಉಳಿದಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ