ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

Sampriya

ಮಂಗಳವಾರ, 12 ಆಗಸ್ಟ್ 2025 (19:22 IST)
Photo Credit X
ನವದೆಹಲಿ: ಮತದಾರರ ಪಟ್ಟಿ ದುರ್ಬಳಕೆ ಮತ್ತು ಚುನಾವಣಾ ವಂಚನೆ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನದ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಮತ್ತು ಮುಂಚೂಣಿ ಸಂಘಟನೆಗಳ ಮುಖ್ಯಸ್ಥರ ಸಭೆ ನಡೆಸಿದರು. 

ಸಚಿನ್ ಪೈಲಟ್, ಕೆಸಿ ವೇಣುಗೋಪಾಲ್, ಕುಮಾರಿ ಸೆಲ್ಜಾ ಮತ್ತು ಇತರರು.

ಇದಕ್ಕೂ ಮೊದಲು, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯಕರ್ತರು ದೆಹಲಿಯಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಿಂದ ಜಂತರ್ ಮಂತರ್‌ಗೆ ಮೆರವಣಿಗೆ ನಡೆಸಿದರು.


ಮತದಾರರ ಪಟ್ಟಿ ದುರ್ಬಳಕೆ ಆರೋಪದ ಮೇಲೆ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿಯವರ ಆರೋಪದ ಬೆನ್ನಲ್ಲೇ ಪ್ರತಿಭಟನೆ ನಡೆಯಿತು. ರಾಷ್ಟ್ರ ರಾಜಧಾನಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು 'ಹಲ್ಲಾ ಬೋಲ್ ಮಾರ್ಚ್' ಕೂಡ ನಡೆಸಿದರು, ಈ ಸಂದರ್ಭದಲ್ಲಿ ಹಲವಾರು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ