ಕಾಂಗ್ರೆಸ್‌ನ 'ಘರ್ ಘರ್‌ ಗ್ಯಾರಂಟಿ' ಅಭಿಯಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಚಾಲನೆ

Sampriya

ಬುಧವಾರ, 3 ಏಪ್ರಿಲ್ 2024 (16:25 IST)
Photo Courtesy X
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ನ 'ಘರ್ ಘರ್‌ ಗ್ಯಾರಂಟಿ'  ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,  ದೇಶಾದ್ಯಂತ ಎಂಟು ಕೋಟಿ ಕುಟುಂಬಗಳನ್ನು ತಲುಪುವ ಮತ್ತು ಅದರ "ಖಾತರಿ" ಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಈಶಾನ್ಯ ದೆಹಲಿ ಸಂಸದೀಯ ಕ್ಷೇತ್ರದ ಕೈತವಾಡದ ಉಸ್ಮಾನ್‌ಪುರದಿಂದ ಅಭಿಯಾನವನ್ನು ಶುರುಮಾಡಿದ್ದು, ಈ ವೇಳೆ ಪಕ್ಷದ 'ಪಾಂಚ್ ನ್ಯಾಯ್ ಪಚೀಸ್ ಗ್ಯಾರಂಟಿ' ಕುರಿತು ಕರಪತ್ರಗಳನ್ನು ಹಂಚಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 'ಪಂಚ ನ್ಯಾಯ್ ಪಚೀಸ್ ಗ್ಯಾರಂಟಿ' ಅನ್ನು ಜನರಿಗೆ ತಲುಪಿಸಲು ಈ ಗ್ಯಾರಂಟಿ ಕಾರ್ಡ್ ಅನ್ನು ವಿತರಿಸುತ್ತಿದ್ದೇವೆ. ದೇಶಾದ್ಯಂತ ಎಂಟು ಕೋಟಿ ಕುಟುಂಬಗಳಿಗೆ ಈ ಉಪಕ್ರಮವನ್ನು ತೆಗೆದುಕೊಳ್ಳಲು ನಾವು ಬಯಸುತ್ತೇವೆ" ಎಂದು ಈ ವೇಳೆ ಖರ್ಗೆ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ