ಮೋದಿ ಹಲ್ಲು ಮುರಿಯುವ ರಸಗುಲ್ಲಾ ಕಳಿಸ್ತೀನಿ ಏನಿವಾಗ? ಮಮತಾ ಬ್ಯಾನರ್ಜಿ ಸ್ವೀಟ್ ಪ್ರಸಂಗ!

ಶನಿವಾರ, 27 ಏಪ್ರಿಲ್ 2019 (06:48 IST)
ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ರೊಂದಿಗಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ನನಗೆ ಮಮತಾ ಬ್ಯಾನರ್ಜಿ ಪ್ರತೀ ವರ್ಷ ಬೆಂಗಾಳಿ ಸ್ವೀಟ್ಸ್ ಕಳುಹಿಸುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಮಮತಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.


ಅಕ್ಷಯ್ ಕುಮಾರ್ ಜತೆಗಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ರಾಜಕೀಯದ ಹೊರತಾಗಿ ಮಮತಾ ಬ್ಯಾನರ್ಜಿಯೊಂದಿಗೆ ನಾನು ಉತ್ತಮ ಬಾಂಧವ್ಯವನ್ನೇ ಹೊಂದಿದ್ದೇನೆ. ನನಗೆ ಬೆಂಗಾಲಿ ಸ್ವೀಟ್ಸ್ ಇಷ್ಟ ಎನ್ನುವ ಕಾರಣಕ್ಕೆ ಅವರು ಪ್ರತೀ ವರ್ಷ ತಪ್ಪದೇ ಸ್ವೀಟ್ಸ್ ಕಳುಹಿಸುತ್ತಾರೆ ಎಂದಿದ್ದರು.

ಈ ಬಗ್ಗೆ ಪತ್ರಕರ್ತರು ಮಮತಾ ಬ್ಯಾನರ್ಜಿಯವರನ್ನು ಪ್ರಶ್ನಿಸಿದಾಗ ‘ಏನು ಸ್ವೀಟ್ಸಾ? ಹೌದು. ನಾನು ಮೋದಿಗೆ ಪ್ರತೀ ವರ್ಷ ಮಣ್ಣು ಮತ್ತು ಗುಂಡು ಕಲ್ಲಿನಿಂದ ಮಾಡಿದ ರಸಗುಲ್ಲಾ ಕಳುಹಿಸುತ್ತೇನೆ. ಹಾಗೆ ಅವರ ಹಲ್ಲು ಮುರಿಯಲಿ ಎಂದು’ ಎಂದು ಮಮತಾ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ